ಕಡಬ ಸರಸ್ವತಿ ವಿದ್ಯಾಲಯ: ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕಿನೆಡೆಗೆ ನಡೆಸುವವನೇ ನಿಜವಾದ ಗುರು ಇಂತಹ ಗುರುಗಳನ್ನು ನಾವು ಪುಜಿಸುವುದು ಕರ್ತವ್ಯವಾಗಿಸಿಕೊಳ್ಳಬೇಕು ಎಂದು ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ ಹೇಳಿದರು.

ಕಡಬದ ಸರಸ್ವತಿ ವಿದ್ಯಾಲಯದ ಪ್ರೌಢಶಾಲೆಯಲ್ಲಿ ನಡೆದ ಗುರುಪುರ್ಣಿಮೆಯಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರ ಜೀವನದ ಯಶಸ್ಸಿನಲ್ಲಿ ತಂದೆ ತಾಯಿಯಷ್ಟೆ ಪಾತ್ರ ಗುರುವಿನದ್ದಿದೆ. ಇಂತಹ ಗುರುಗಳನ್ನು ಗೌರವಿಸುವುದು ಜೀವನದ ಒಂದು ಭಾಗವರಿಸಿಕೊಳ್ಳಬೇಕು ಎಂದರು. ಸಂಸ್ಥೆಯ ಅದ್ಯಕ್ಷರಾದ ರವಿರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರೌಢ ವಿಭಾಗದ ಮುಖ್ಯಸ್ಥರಾದ ಶೈಲಾಶ್ರೀ ರೈ ಉಪಸ್ಥಿತರಿದ್ದರು.

Also Read  ಉಪ್ಪಿನಂಗಡಿ: ಕೋವಿಡ್-19 ಹಿನ್ನಲೆ ತೆಕ್ಕಾರಿನಲ್ಲಿ ಸರಳ ಈದ್ ಮೀಲಾದ್ ಆಚರಣೆ

error: Content is protected !!
Scroll to Top