ಅಡ್ಯಾರ್: ಭೀಕರ ಸರಣಿ ಅಪಘಾತ ► ಓರ್ವ ಮೃತ್ಯು, ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.27. ಎರಡು ಕಾರುಗಳು, ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ನಡೆದ ಸರಣಿ ಅಪಘಾತದಲ್ಲಿ ಯುವಕನೋರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ನಗರದ ಹೊರವಲಯದ ಅಡ್ಯಾರಿನಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಮೃತ ಯುವಕನನ್ನು ಇಲೆಕ್ಟ್ರೀಷಿಯನ್ ವೃತ್ತಿಯಲ್ಲಿದ್ದ ಫಾರೂಕ್(26) ಎಂದು ಗುರುತಿಸಲಾಗಿದೆ. ಬಿ.ಸಿ.ರೋಡ್ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ವಾಹನಗಳು ಏಕಮುಖ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಕಣ್ಣೂರು ಮಸೀದಿ ಬಳಿ ತಲುಪಿದಾಗ ಹನೀಫ್ ಎಂಬವರು ಚಲಾಯಿಸುತ್ತಿದ್ದ ಕಾರು ಉಳಿದ ವಾಹನಗಳಿಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಘಟನೆಯಲ್ಲಿ ಹನೀಫ್, ಸಫ್ರಾಝ್ ಹಾಗೂ ತೌಸೀಫ್ ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹನೀಫ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ.

Also Read  ಜೂ. 28ರಂದು ಜನಸ್ಪಂದನ ಸಭೆ

error: Content is protected !!
Scroll to Top