ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.27. ಠಾಣಾ ವ್ಯಾಪ್ತಿಯ ಶೇಣಿಯಲ್ಲಿ ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಸರಣಿ ಅತ್ಯಾಚಾರಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಮರ ಮೂಡ್ನೂರು ಗ್ರಾಮದ ಕುಡುಂಬಿಲ ನಿವಾಸಿ ಕುಂಇಪ್ಪ ನಾಯ್ಕ ಎಂಬವರ ಪುತ್ರ ಜಯಪ್ರಕಾಶ್ (25), ಚೊಕ್ಕಾಡಿಯ ನೇಣಾರು ನಿವಾಸಿ ಕೂಸಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (20), ಕುಕ್ಕುಜಡ್ಕದ ನೇರ್ಲಡ್ಕ ನಿವಾಸಿ ಗುಡ್ಡಪ್ಪನಾಯ್ಕ ಎಂಬವರ ಪುತ್ರ ರವೀಂದ್ರ (35) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರ ಸಂಜೆ ಹಾಲು ಉತ್ಪಾದಕರ ಸಂಘಕ್ಕೆ ಹಾಲು ಕೊಂಡೊಯ್ದು ಹಿಂದಿರುಗುತ್ತಿದ್ದ ಯುವತಿಯೋರ್ವಳನ್ನು ಬಲವಂತವಾಗಿ ಎತ್ತಿ ರಿಕ್ಷಾದ ಒಳಗೆ ಹಾಕಿಕೊಂಡು ಚೊಕ್ಕಾಡಿ ಸಮೀಪದ ರಬ್ಬರ್ ತೋಟದಲ್ಲಿ ಬಾಯಿಗೆ ಬಟ್ಟೆಯನ್ನು ಒತ್ತಿ ಬಲತ್ಕಾರದಿಂದ ಅತ್ಯಾಚಾರ ಮಾಡಿದ್ದಲ್ಲದೆ, ಈ ವಿಚಾರವನ್ನು ಮನೆಯವರಲ್ಲಿ ತಿಳಿಸಿದರೆ ಕೊಲ್ಲುವುದಾಗಿ ಬೆದರಿಸಿ ಅದೇ ಆಟೋದಲ್ಲಿ ಶೇಣಿಗೆ ಕರೆತಂದು ಇಳಿಸಿ ಪರಾರಿಯಾಗಿದ್ದರು.

Also Read  ಜಲಾಶಯಕ್ಕೆ ಹಾರಿ ಶಿಕ್ಷಕ ಆತ್ಮಹತ್ಯೆ..!

ಈ ಬಗ್ಗೆ ನೊಂದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬೆಳ್ಳಾರೆ ಪೊಲೀಸರು, ಜಿಲ್ಲಾ ಎಸ್ಪಿ ಡಾ. ಬಿ.ಆರ್. ರವಿಕಾಂತೇಗೌಡ IPS ರವರ ಆದೇಶದಂತೆ ಹೆಚ್ಚುವರಿ ಎಸ್ಪಿ ಸಜೀತ್, ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್, ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಸತೀಶ್ ಕುಮಾರ್ ಮಾರ್ಗದರ್ಶನದಲ್ಲಿ ಬೆಳ್ಳಾರೆ ಠಾಣಾ ಸಬ್ ಇನ್ಸ್‌ಪೆಕ್ಟರ್ ಈರಯ್ಯ ಡಿ.ಎನ್ ಹಾಗೂ ಸಿಬ್ಬಂದಿಗಳು ಬುಧವಾರದಂದು ಆರೋಪಿಗಳನ್ನು ಚೊಕ್ಕಾಡಿಯ ಸಮೀಪ ಬಂಧಿಸಿದ್ದಾರೆ.

error: Content is protected !!
Scroll to Top