ಮಂಗಳೂರು: 48 ಮೊಬೈಲ್ ಟವರ್ ಗಳ ಬ್ಯಾಟರಿ ಕಳ್ಳತನ ► ಬಿಳಿನೆಲೆ ನಿವಾಸಿ ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಮೊಬೈಲ್ ಟವರ್ ಗಳಲ್ಲಿನ ಬ್ಯಾಟರಿ ಕಳವು ಪ್ರಕರಣವನ್ನು ಭೇದಿಸಿರುವ ಉರ್ವ ಠಾಣಾ ಪೊಲೀಸರು ಕಡಬದ ಬಿಳಿನೆಲೆ ನಿವಾಸಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇಂಡಸ್ ಕಂಪೆನಿಗೆ ಸೇರಿದ 48 ಮೊಬೈಲ್ ಟವರ್‌ನ ಬ್ಯಾಟರಿಗಳು ಕಳವಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದ ಉರ್ವ ಠಾಣಾ ಪೊಲೀಸರು ಇಂಡಸ್ ಕಂಪೆನಿಯ ಬ್ಯಾಟರಿಗಳ ನಿರ್ವಹಣೆಯ ಗುತ್ತಿಗೆ ಪಡೆದಿದ್ದ ಸಂಸ್ಥೆಯೊಂದರ ಸಿಬ್ಬಂದಿಗಳಾದ ಕಡಬದ ಬಿಳಿನೆಲೆ ನಿವಾಸಿ ಆನಂದ್(28), ಕಡೂರಿನ ಸೋಮನಹಳ್ಳಿ ನಿವಾಸಿ ಕೆ.ಎನ್.ಗಿರೀಶ್(36) ಹಾಗೂ ಭಟ್ಕಳ ಜಾಲಿಕೋಡಿ ನಿವಾಸಿ ಜಗನ್ನಾಥ್ ಮುಗೇರ(32) ಎಂಬವರನ್ನು ಬಂಧಿಸಿ ಕಳವು ಮಾಡಲಾಗಿದ್ದ 1 ಲಕ್ಷ 20 ಸಾವಿರ ರೂ. ಮೌಲ್ಯದ 48 ಬ್ಯಾಟರಿಗಳು ಹಾಗೂ ಕೃತ್ಯಕ್ಕೆ ಬಳಸಿದ ಆಲ್ಟೋ ಕಾರನ್ನು ವಶಪಡಿಸಿಕೊಂಡಿದ್ದಾರೆ.

Also Read  ಕೇಂದ್ರ ಬಜೆಟ್; ದೇಶದಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ

ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಉಪ ಪೊಲೀಸ್ ಆಯುಕ್ತ ಹನುಮಂತರಾಯ, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತೆ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಉರ್ವ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!
Scroll to Top