ಬೆಳ್ಳಾರೆ: ಯುವತಿಯನ್ನು ಪುಸಲಾಯಿಸಿ ಮೂವರಿಂದ ಸರಣಿ ಅತ್ಯಾಚಾರ ► ಓರ್ವ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.26. ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಮೂವರು ಸರಣಿ ಅತ್ಯಾಚಾರ ಎಸಗಿದ ಘಟನೆ ಸೋಮವಾರದಂದು ಠಾಣಾ ವ್ಯಾಪ್ತಿಯ ಚೊಕ್ಕಾಡಿಯಲ್ಲಿ ನಡೆದಿದೆ.

ಹಾಲು ಉತ್ಪಾದಕರ ಸಂಘಕ್ಕೆ ಹಾಲು ಕೊಂಡೊಯ್ದು ಹಿಂದಿರುಗುತ್ತಿದ್ದ ಯುವತಿಯನ್ನು ಇಬ್ಬರು ಆಟೊ ರಿಕ್ಷಾ ಚಾಲಕರು ಸೇರಿದಂತೆ ಮೂವರು ಪುಸಲಾಯಿಸಿ ಬಲವಂತದಿಂದ ಕರೆದೊಯ್ದು ರಬ್ಬರ್ ತೋಟದಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ಮಂಗಳವಾರದಂದು ಬೆಳ್ಳಾರೆ ಠಾಣೆಗೆ‌ ಯುವತಿ ದೂರು ನೀಡಿದ್ದಾರೆ. ಯುವತಿಯ ದೂರಿನಂತೆ ಬೆಳ್ಳಾರೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Also Read  ಬಿದ್ದು ಸಿಕ್ಕಿದ ಚಿನ್ನವನ್ನು ಮಾಲಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಪ್ರಭಾಕರ್

error: Content is protected !!
Scroll to Top