ಪುತ್ತೂರು: 50 ಲಕ್ಷ ನಿಷೇಧಿತ ಹಳೆನೋಟು ವಶ ► ಮೂವರು ಆರೋಪಿಗಳ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.16. ದಾಖಲೆ ರಹಿತವಾಗಿ 50 ಲಕ್ಷ ರೂ. ನಿಷೇಧಿತ ಹಳೆನೋಟುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಭೇಧಿಸಿರುವ ಪುತ್ತೂರು ನಗರ ಪೊಲೀಸರು ಮೂವರನ್ನು ಬಂಧಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

ಆರೋಪಿಗಳಾದ ಻ಬ್ದುಲ್ ನಿಸಾರ್, ಮಹಮ್ಮದ್ ಸಿರಾಜ್ ಹಾಗೂ ಅಬ್ದುಲ್ ಹಾರೀಸ್ ಎಂಬವರು ಮಡಿಕೇರಿಯಿಂದ ಮಾಣಿ ಕಡೆಗೆ ಕಾರಿನಲ್ಲಿ ಹಳೆನೋಟುಗಳನ್ನು ಸಾಗಿಸುತ್ತಿದ್ದಾಗ ಪುತ್ತೂರು ಬೈಪಾಸ್ ಉರ್ಲಾಂಡಿ ಸಮೀಪ ತಪಾಸಣೆ ನಡೆಸಿದ ಪೊಲೀಸರು ಾರೋಪಗಳ ಸಹಿತ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕುಡುಪು ದೇಗುಲಕ್ಕೆ ಕೊರೋನಾ ಎಫೆಕ್ಟ್ ➤ ನಾಗರ ಪಂಚಮಿಯಂದು ಭಕ್ತರ ಪ್ರವೇಶಕ್ಕೆ ನಿರ್ಬಂಧ..!!!

error: Content is protected !!
Scroll to Top