ಬಂಟ್ವಾಳ: ಮಹಾಮಳೆಗೆ ಮುರಿದು ನದಿಗೆ ಬಿದ್ದ ಮುಳ್ಳರಪಟ್ಣ ಸೇತುವೆ ► ವಾಹನ ಸಂಚಾರವಿಲ್ಲದ ಕಾರಣ ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.25. ನದಿಗೆ ಅಡ್ಡಲಾಗಿ ಕಟ್ಟಿಲಾಗಿದ್ದ ಸೇತುವೆಯೊಂದು ಕುಸಿದು ನದಿಗೆ ಬಿದ್ದ ಘಟನೆ ಬಂಟ್ವಾಳ ತಾಲೂಕಿನ ಮುಲ್ಲರಪಟ್ಣದಲ್ಲಿ ಸೋಮವಾರ ಸಂಜೆ‌ ನಡೆದಿದೆ.

ಕುಪ್ಪೆಪದವು – ಬಿ.ಸಿ‌. ರೋಡ್ ರಾಜ್ಯ ಹೆದ್ದಾರಿಯ ಮುಲ್ಲರಪಟ್ಣ ಎಂಬಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯು ಸೋಮವಾರ ಸಂಜೆ ಇದ್ದಕ್ಕಿದ್ದಂತೆ ತುಂಬಿ ಹರಿಯುತ್ತಿರುವ ಫಲ್ಗುಣಿ ನದಿಗೆ ಬಿದ್ದಿದೆ. ಈ ಸಂದರ್ಭದಲ್ಲಿ ಸೇತುವೆಯ ಮೇಲೆ ಯಾವುದೇ ವಾಹನ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಸೇತುವೆಯ ಅಡಿಭಾಗದಲ್ಲಿ ಮರಳುಗಾರಿಕೆ ನಡೆಸಿರುವ ಹಿನ್ನೆಲೆಯಲ್ಲಿ ಸೇತುವೆ ಕುಸಿದಿರಬಹುದೆಂದು ಸ್ಥಳೀಯರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

Also Read  ಉಪ್ಪಿನಂಗಡಿ: ಬೈಕ್ - ಬಸ್ ಢಿಕ್ಕಿ ► ದಂಪತಿ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top