ಆಲಂಕಾರು ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜು: ಗಣಕ ಯಂತ್ರ ಘಟಕ ಉದ್ಟಾಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.16. ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ಕಂಪ್ಯುಟರ್ ಶಿಕ್ಷಣವು ಪುರಕವಾಗಲಿದೆ ಎಂದು ಕಾರ್ಪೋರೇಟ್ ಟ್ರೈನರ್ ನಿರಂಜನ್ ರೈ ಹೇಳಿದರು.

ಅವರು ಶ್ರೀ ದುರ್ಗಾಂಬ ಪದವಿಪುರ್ವ ವಿದ್ಯಾಲಯದ ಗಣಕ ಯಂತ್ರ ಘಟಕವನ್ನು ಉದ್ಟಾಟಿಸಿ ಮಾತನಾಡುತ್ತಿದ್ದರು. ಭವಿಷ್ಯದ ಉನ್ನತ ಜೀವನಕ್ಕೆ ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಕಂಪ್ಯುಟರ್ ಶಿಕ್ಷಣವು ಇಂದಿನ ಶಿಕ್ಷಣ ಕ್ಷೇತ್ರಕ್ಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳ ಮುಂದಿನ ವೃತ್ತಿಪರ ಜೀವನಕ್ಕೆ ವಿದ್ಯಾರ್ಥಿ ದೆಸೆಯಲ್ಲಿಯೇ ಗಣಕ ಯಂತ್ರದ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದರು.ನ್ಯಾಯವಾದಿ ಮನೋಹರ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಶಾಲಾ ಡೊನೇಷನ್ ಪಡೆದು ಗಣಕ ಯಂತ್ರದ ಶಿಕ್ಷಣವನ್ನು ನೀಡುತ್ತಿರುವ ಇಂತಹ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿಯಾಗಬೇಕು. ಸರಕಾರ ಇಂತಹ ಶಿಕ್ಷಣ ಸಂಸ್ಥೆಗಳನ್ನು ಗುರುತಿಸಿ ಹೆಚ್ಚು ಅನುದಾನ ನೀಡಲು ಅಸಾಧ್ಯವಾದರೂ ಶಿಕ್ಷಕ ಕೊರತೆಯನ್ನು ನೀಗಿಸಿ ಉತ್ತಮ ಶಿಕ್ಷಣ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

Also Read  ಕಡಬ: ಶಾಲಾ ವಿದ್ಯಾರ್ಥಿ ನಾಪತ್ತೆ

ಶಾಲಾ ಆಡಳಿತ ಮಂಡಳಿಯ ಸಂಚಾಲಕ ಉಮೇಶ್ ರೈ ಮನವಳಿಕೆಯವರ ಅಧ್ಯಕ್ಷತೆವಹಸಿದ್ದರು. ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಈಶ್ವರ ಗೌಡ.ಪಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಆನಂದ ಗೌಡ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ತಾರಾನಾಥ ರೈ, ದಯಾನಂದ ಗೌಡ ಆಲಡ್ಕ, ರಾಮರಾಜ್, ಇಂದುಶೇಖರ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ನಾರಯಣ ಭಟ್ ಪ್ರಾಸ್ತಾವಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷ ದಯಾನಂದ ರೈ ಸ್ವಾಗತಿಸಿದರು. ಶಿಕ್ಷಕಿ ರೂಪಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಂಶುಪಾಲ ನವೀನ್ ರೈ ವಂದಿಸಿದರು.

error: Content is protected !!
Scroll to Top