ನೂಜಿಬಾಳ್ತಿಲ ಬೆಥನಿ ಪ.ಪೂ.ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ ► ವಿದ್ಯಾರ್ಥಿ ನಾಯಕಿಯಾಗಿ ಇಂದಿಕಾ ಕೆ. ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.24. ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ 2018-19ನೇ ಸಾಲಿನ ಕಾಲೇಜು ವಿದ್ಯಾರ್ಥಿ ನಾಯಕಿಯಾಗಿ ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿನಿ ಇಂದಿಕಾ ಕೆ. ಚುನಾಯಿತರಾಗಿದ್ದಾರೆ.

ಶನಿವಾರದಂದು ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ ಇಂದಿಕಾ ಕೆ., ಅತ್ಯಧಿಕ ಮತ ಪಡೆದು ನಾಯಕಿಯಾಗಿ ಆಯ್ಕೆಗೊಂಡರು. ಇವರು ಕಡಬದ ಪರ್ತಕರ್ತ ಖಾದರ್ ಸಾಹೇಬ್ ಹಾಗೂ ಕಲ್ಲುಗುಡ್ಡೆ  ಅಂಗನವಾಡಿ ಕಾರ್ಯಕರ್ತೆ ಅಮೀನ ಕೆ. ದಂಪತಿಯ ಪುತ್ರಿಯಾಗಿದ್ದಾರೆ.

error: Content is protected !!
Scroll to Top