(ನ್ಯೂಸ್ ಕಡಬ) newskadaba.com ಕಡಬ, ಜೂ.24. ಜೀವನದಲ್ಲಿ ದುಡಿದಿದ್ದರಲ್ಲಿ ಒಂದಂಶವನ್ನು ಸಮಾಜಕ್ಕೆ ವಿನಿಯೋಗಿಸುವುದರಲ್ಲಿ ಅರ್ಥವಿದೆ ಎಂದು ಕುಂಬೋಳ್ ಕೆ.ಎಸ್. ಆಟಕೋಯ ತಂಙಳ್ ರವರ ಪುತ್ರ ಮುಖ್ತಾರ್ ತಂಙಳ್ ಕುಂಬೋಳ್ ಹೇಳಿದರು.
ಅವರು ಇಲ್ಲಿನ ಕುಂತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸುಸಜ್ಜಿತ ವಸತಿ ಸಮುಚ್ಚಯ ಯು.ಕೆ.ಎಮ್. ಆರ್ಕೇಡ್ ಉದ್ಘಾಟಿಸಿ ಮಾತನಾಡಿದರು. ಕಷ್ಟದಿಂದ ಮೇಲೆ ಬಂದಿರುವ ಕಟ್ಟಡದ ಮಾಲಕ ಯು.ಕೆ. ಮಹಮ್ಮದ್ ರವರ ಶ್ರಮದಿಂದಾಗಿ ಈ ಒಂದು ಸುಸಜ್ಜಿತ ವಸತಿ ಸಮುಚ್ಚಯವು ಇಂದು ತಲೆಯೆತ್ತಿ ನಿಂತಿದೆ. ಬೆಳೆಯುತ್ತಿರುವ ಕುಂತೂರಿಗೆ ಅಗತ್ಯವಾಗಿ ಬೇಕಾಗಿದ್ದ ಈ ವಸತಿ ಸಮುಚ್ಚಯವು ಯಶಸ್ಸಿನ ಉತ್ತುಂಗಕ್ಕೇರಲಿ ಎಂದು ಶುಭಹಾರೈಸಿದರು. ಮಾಣಿ ದಾರುಲ್ ಇರ್ಶಾದ್ ಸ್ಥಾಪನೆಯ ಮುಖ್ಯಸ್ಥ ಅಲ್ ಹಾಜ್ ಝೈನುಲ್ ಉಲೆಮಾ ಮಾಣಿ ಹಮೀದ್ ಮುಸ್ಲಿಯಾರ್ ದುವಾಃ ನೆರವೇರಿಸಿದರು. ಕುಂತೂರು ಜುಮಾ ಮಸೀದಿಯ ಖತೀಬರಾದ ರಶೀದ್ ರಹ್ಮಾನಿ ಮೌಲೂದ್ ಪಾರಾಯಣ ನಡೆಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ್ ಸದಸ್ಯರಾದ ಎಂ.ಎಸ್. ಮಹಮ್ಮದ್, ಜಿಲ್ಲಾ ಪರಿಷತ್ ಸದಸ್ಯರಾದ ಹಾಜಿ ಮೀರಾನ್ ಸಾಹೇಬ್ ವಕ್ಫ್ ಮಂಡಳಿಯ ಮಾಜಿ ಸದಸ್ಯ ಎಚ್.ಆದಂ. ಆತೂರು, ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲಿನ ಅಬ್ಬಾಸ್ ಹಾಜಿ ನೆಕ್ಕರೆ, ತಿಂಗಳಾಡಿ ಮಸೀದಿಯ ಹಾಜಿ ಕಬೀರ್ ಮಹ್ಮದ್, ವಾರ್ತಾ ಭಾರತಿ ಪತ್ರಿಕೆಯ ತಸ್ಲೀಂ ಮರ್ದಾಳ, ಹುಸೈನಾರ್ ಮುಸ್ಲಿಯಾರ್, ಹಮೀದ್ ಮುಸ್ಲಿಯಾರ್, ಹಂಝ ಸಹದಿ, ಅಬ್ದುಲ್ ರಹಮಾನ್ ಮುಸ್ಲಿಯಾರ್, ಗ್ರಾ.ಪಂ. ಅಧ್ಯಕ್ಷೆ ಬೇಬಿ ಪಾಟಾಲಿ, ಚಂದ್ರ ಪಾಟಾಲಿ, ಚಂದ್ರಶೇಖರ ರೈ, ಜನಾರ್ದನ ಗಟ್ಟಿ, ಹೊಸ್ಮಠ ಮಸೀದಿಯ ಅಬ್ದುಲ್ ಕರೀಂ, ಫಯಾಜ್ ಮುಸ್ಲಿಯಾರ್ ಚಾರ್ಮಾಡಿ, ಮಾಜಿ ಪಂಚಾಯತ್ ಉಪಾಧ್ಯಕ್ಷ ಯಾಕುಬ್, ಕಟ್ಟಡದ ಕಾಂಟ್ರಾಕ್ಟರ್ ಶಿವರಾಂ, ಬೇಳ್ವಾಡಿ ಚಾರಿಟೇಬಲ್ ಟ್ರಸ್ಟ್ ನ ಅಬ್ದುಲ್ಲ ಮುಡಿಪಿನಡ್ಕ, ಪುತ್ತುಮೋನು ಮುಡಿಪಿನಡ್ಕ, ಕೆಎಸ್ಆರ್ಟಿಸಿ ಉದ್ಯೋಗಿ ಹನೀಫ್, ಉದ್ಯಮಿ ಹಮೀದ್, ನೆಕ್ಕರೆ ಮಸೀದಿ ಅಧ್ಯಕ್ಷ ಅಬ್ದುಲ್ ಕುಂಞ, ದ.ಕ. ಜಿಲ್ಲಾ ಎಂಡೋ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಫೀರ್ ಮಹಮ್ಮದ್ ಸಾಹೇಬ್, ಲಕ್ಷ್ಮೀ ಪ್ರಸನ್ನ ಮೂಲತ್ವದ ವಿದ್ಯಾರಣ್ಯ, ಹಾಜಿ ಅಬೂಬಕ್ಕರ್ ಕಜೆ, ಪುತ್ತುಮೋನು ಗಾಂಜಾಲ್, ಉಮ್ಮರ್ ಮದನಿ ಕುಂಡಾಜೆ, ಲೋಲಾಕ್ಷ ಶೆಟ್ಟಿ, ಮೊದಲಾದವರು ಭಾಗವಹಿಸಿ ಶುಭಕೋರಿದರು. ಕಟ್ಟಡ ಮೂಲಕ ಯು.ಕೆ. ಮಹಮ್ಮದ್ ಅಬ್ದುಲ್ ಕೆಎಸ್ಆರ್ಟಿಸಿ ಹಮೀದ್ ಯು.ಕೆ., ಯಹ್ಯಾ ಯು.ಕೆ., ಶಾಫಿ ದುಬೈ, ಇಕ್ಬಾಲ್ ಪೂಂಜ, ಹಾಗೂ ತಶ್ಮರವರು ಅತಿಥಿಗಳನ್ನು ಬರಮಾಡಿಕೊಂಡರು.
ಅಬ್ಬಾಸ್ ಕುಂತೂರು ಹಾಗೂ ಉನೈಸ್ ಅಹಮ್ಮದ್ ಸ್ವಾಗತಿಸಿ ವಂದಿಸಿದರು.