ಕೋಡಿಂಬಾಳ: ಕತ್ತಿಯಿಂದ ಕಡಿದು ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ► ಇತ್ತಂಡಗಳಿಂದಲೂ ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.23. ಯುವತಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯ ಕೋಡಿಂಬಾಳದಲ್ಲಿ ಶುಕ್ರವಾರ ರಾತ್ರಿ ನಾಲ್ವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತಂಡಗಳ ಒಟ್ಟು ಏಳು ಜನರ ವಿರುದ್ಧ ಶನಿವಾರ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

102 ನೇ ನೆಕ್ಕಿಲಾಡಿ ಗ್ರಾಮದ ಕೋರಿಯಾರ್ ನಿವಾಸಿ ಅಬ್ದುಲ್ ಜಾಹಿದ್ ಎಂಬವರು ದೂರು ನೀಡಿ ತನ್ನ ಸಹೋದರಿಗೆ ಕೋಡಿಂಬಾಳ ಗ್ರಾಮದ ಮಜ್ಜಾರ್ ನಿವಾಸಿ ಅಲ್ಫಾಸ್ ಎಂಬವರು ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತನಲ್ಲಿ ವಿಚಾರಿಸಲು ಹೋದಾಗ ಆತನ ತಂದೆ ಇಸ್ಮಾಯಿಲ್ ಹಾಗೂ ತಾಯಿ ಶಮೀಮಾ ನಮಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವುದಲ್ಲದೆ, ಮಗ ಅಲ್ಫಾಸ್‍ಗೆ ಕತ್ತಿ ನೀಡಿ ನಮ್ಮನ್ನು ಕೊಲೆ ಮಾಡಲು ಆದೇಶಿಸಿದ ಮೇರೆಗೆ ಪ್ರೇರಿತನಾದ ಅಲ್ಫಾಸ್ ಹಾಗೂ ಇಸ್ಮಾಯಿಲ್ ನನಗೆ ಹಾಗೂ ನನ್ನ ಸಂಬಂಧಿಕರಾದ ಕೋರಿಯಾರ್ ನಿವಾಸಿಗಳಾದ ಅಬ್ದುಲ್ ರಶೀದ್, ಅಬ್ದುಲ್ ಹನೀಫ್, ಹಾಗೂ ನೌಶಾದ್ ಅವರಿಗೆ ಕತ್ತಿಯಿಂದ ತಲೆಗೆ, ಭುಜಕ್ಕೆ, ಕಣ್ಣಿನ ಭಾಗಕ್ಕೆ ಮಾರಣಾತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೊಂದು ಕಡೆಯಿಂದ ಅಲ್ಪಾಸ್ ಅವರು ದೂರು ನೀಡಿ ಅಬ್ದುಲ್ ಜಾಹಿದ್ ಹಾಗೂ ಮೂವರ ತಂಡ ಮನೆಗೆ ಅಕ್ರಮ ಪ್ರವೇಶ ಮಾಡಿ ನಮಗೆ ಹಲ್ಲೆ ನಡೆಸಿರುವುದಲ್ಲದೆ, ನನ್ನ ತಾಯಿಯ ಸೀರೆ ಎಳೆದು ಎದೆಗೆ ಕೈ ಹಾಕಿ ಮಾನಭಂಗ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇತ್ತಂಡಗಳ ದೂರನ್ನು ಸ್ವೀಕರಿಸಿರುವ ಕಡಬ ಎಸ್‍ಐ ಪ್ರಕಾಶ್ ದೇವಾಡಿಗ ಅಲ್ಪಾಸ್ ಹಾಗೂ ತಂಡದ ವಿರುದ್ಧ ಕೊಲೆಯತ್ನ ಹಾಗೂ ಅಬ್ದುಲ್ ಜಾಹಿದ್ ಹಾಗೂ ತಂಡದ ವಿರುದ್ಧ ಅಕ್ರಮ ಪ್ರವೇಶ, ಮಾನಭಂಗ ಯತ್ನ ಹಾಗೂ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಡೆಂಗ್ಯು ತಡೆಯಲು ಸಾರ್ವಜನಿಕರಿಗೆ ಮಾಹಿತಿ ಅಗತ್ಯ..! -  ಡಾ.ಆನಂದ್ ಕೆ

error: Content is protected !!
Scroll to Top