ನೆಲ್ಯಾಡಿ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ► ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ.23. ಇಲ್ಲಿನ ಅಲ್ಫೋನ್ಸಾ ಚರ್ಚ್‌ನ ಮುಂಭಾಗದಲ್ಲಿ ಕಳೆದ ಗುರುವಾರದಂದು ನಡೆದ ಬೈಕ್ ಗಳ ಪರಸ್ಪರ ಢಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಸವಾರನೋರ್ವ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.

ಮೃತ ಸವಾರನನ್ನು ನೆಲ್ಯಾಡಿಯ ಪಾಂಡಿಬೆಟ್ಟು ಹೊಸಮನೆ ನಿವಾಸಿ ಕೊರಗಪ್ಪ ಗೌಡರ ಕಿರಿಯ ಪುತ್ರ ಲಕ್ಷ್ಮಣ ಗೌಡ (ಸುರೇಶ್) ಎಂದು‌ ಗುರುತಿಸಲಾಗಿದೆ. ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿದ್ದ ಮೃತರು ಮಾಜಿ ಪಂಚಾಯತ್ ಸದಸ್ಯನಾಗಿ ಸಮಾಜಮುಖಿ ಸೇವೆಗಳಿಂದ ಪರಿಸರದಲ್ಲಿ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಮಕ್ಕಳು ಸೇರಿದಂತೆ ಹಲವಾರು ಬಂಧು ಮಿತ್ರರನ್ನು ಅಗಲಿದ್ದಾರೆ.

Also Read  ಶೌರ್ಯ ಪ್ರಶಸ್ತಿ ಪುರಸ್ಕೃತ ಕೊರೋನಾ ವಾರಿಯರ್‍ ಡಾ. ಪಿ.ಆರ್.ಎಸ್.ಚೇತನ್ ರವರಿಗೆ‌ ಸನ್ಮಾನ

error: Content is protected !!
Scroll to Top