ಧರ್ಮಸ್ಥಳ: ಕೆಎಸ್ಸಾರ್ಟಿಸಿಯ ಅವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದ ಬಸ್ ಚಾಲಕ ► ನಿಗಮದ ಮಾನವನ್ನು ಹರಾಜು ಹಾಕಿದ್ದ ರಮೇಶ್ ಕೊನೆಗೂ ಅಮಾನತು

(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಜೂ.22. ಕೆಎಸ್ಸಾರ್ಟಿಸಿ ಧರ್ಮಸ್ಥಳ ಘಟಕದ ಅವ್ಯವಸ್ಥೆಗಳನ್ನು ಬಿಚ್ಚಿಟ್ಟಿದ್ದ ನಿಗಮದ ಚಾಲಕ ರಮೇಶ್ ಎಂಬವರನ್ನು ಕರ್ತವ್ಯದಿಂದ ವಿಚಾರಣಾ ಪೂರ್ವ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಅವರು ಧರ್ಮಸ್ಥಳ ಘಟಕದಲ್ಲಿನ ಅವ್ಯವಸ್ಥೆಗಳನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ನಿಗಮದ ಮಾನವನ್ನು ಹರಾಜು ಹಾಕಿದ್ದರು. ಅಲ್ಲದೆ ಜೂನ್ 30 ರಂದು ಇಲಾಖೆಯ ಮೇಲಾಧಿಕಾರಿಗಳು ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ತನಿಖಾಧಿಕಾರಿಗಳ ವಿರುದ್ಧ ಮಾತನಾಡಿದ್ದಾರೆ‌ ಎಂದು ಆರೋಪಿಸಿ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ತನಿಖಾ ದಳದ ಸಂಯೋಜಕರು ಹಾಗೂ ಪುತ್ತೂರು ವಿಭಾಗದ ಪ್ರಭಾರ ಭದ್ರತಾ ನಿರೀಕ್ಷಕರು ನೀಡಿದ ವರದಿಯನ್ನು ಆಧರಿಸಿ ರಮೇಶ್ ಅವರು ಕೆಎಸ್ಸಾರ್ಟಿಸಿ ನೌಕರರ (ಶಿಸ್ತು ಮತ್ತು ನಡತೆ) ನಿಯಮಾವಳಿ 1971 ಮತ್ತು ಪರಿಷ್ಕೃತ ನಿಯಮಾವಳಿ 1997 ರಂತೆ ಶಿಕ್ಷಾರ್ಹ ಅಪರಾಧ ಎಸಗಿರುವುದರಿಂದ ಮತ್ತು ಆರೋಪಿಯು ಕರ್ತವ್ಯದಲ್ಲಿ ಹಾಜರಿರುವುದು ಪ್ರಕರಣದ ವಿಚಾರಣೆಗೆ ಪ್ರತಿಕೂಲವಾಗಿ ಪರಿಣಮಿಸುವುದರಿಂದ ಆರೋಪಿಯನ್ನು ವಿಚಾರಣಾ‌ ಪೂರ್ವ ಅಮಾನತ್ತು ಮಾಡಿ ಶಿಸ್ತು ಪ್ರಾಧಿಕಾರದ ವಿಭಾಗೀಯ ನಿಯಂತ್ರಣಾಧಿಕಾರಿಯವರು ಆದೇಶಿಸಿದ್ದಾರೆ.

Also Read  ಮುಂದುವರಿದ ಮಳೆಯ ಅಬ್ಬರ - ಕರಾವಳಿ ತತ್ತರ ➤ ದಕ್ಷಿಣ ಕನ್ನಡದಲ್ಲಿ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಣೆ

error: Content is protected !!
Scroll to Top