ನಾಳೆಯಿಂದ ಲೋಕಾಯುಕ್ತರ ದ.ಕ ಜಿಲ್ಲಾ ಪ್ರವಾಸ

(ನ್ಯೂಸ್ ಕಡಬ)newskadaba.com ಮ0ಗಳೂರು,ಜೂನ್.20. ಲೋಕಾಯುಕ್ತ ನ್ಯಾಯಾಧೀಶರಾದ ನ್ಯಾ. ಪಿ. ವಿಶ್ವನಾಥ ಶೆಟ್ಟಿ ಅವರ ದ.ಕ ಜಿಲ್ಲಾ ಪ್ರವಾಸ ಇಂತಿವೆ.
ಜೂನ್ 21 ರಂದು ರಾತ್ರಿ 9 ಗಂಟೆಗೆ ಮಂಗಳೂರು ಸಕ್ರ್ಯೂಟ್ ಹೌಸ್ ಗೆ ಆಗಮಿಸಿ, ವಾಸ್ತವ್ಯ, ಜೂನ್ 22 ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಲಯ, ಅಂಗನವಾಡಿ ಕೇಂದ್ರ, ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಲಿದ್ದಾರೆ. ಸಂಜೆ 6.30 ಕ್ಕೆ ಮಂಗಳೂರಿನಿಂದ ಉಡುಪಿಗೆ ತೆರಳಲಿದ್ದಾರೆ.

Also Read  ಉದ್ಯಾವರ ಬಳಿ ಅಪಘಾತ ➤ ಮುಲ್ಕಿ ಗೃಹರಕ್ಷಕ ದಳದ ಸಿಬ್ಬಂದಿ ಸಾವು

ಜೂನ್ 24 ರಂದು ಸಂಜೆ 6.30 ಗಂಟೆಗೆ ಮಂಗಳೂರು ಸಕ್ರ್ಯೂಟ್ ಹೌಸ್‍ಗೆ ಆಗಮಿಸಿ ವಾಸ್ತವ್ಯ. ಜೂನ್ 25 ರಂದು ಬೆಳಿಗ್ಗೆ 9.30 ಗಂಟೆಗೆ ಮಂಗಳೂರಿನಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ರಾತ್ರಿ 9.55 ಕ್ಕೆ ಮಂಗಳೂರಿನಿಂದ ವಿಮಾನದ ಮೂಲಕ ಬೆಂಗಳೂರಿಗೆ ವಾಪಾಸಾಗಲಿದ್ದಾರೆ.

error: Content is protected !!
Scroll to Top