ಶ್ರೀನಗರದ ವಾಸ್ತವ ಸಂಗತಿಗಳು ಮತ್ತು ಮಾಧ್ಯಮದ ವರದಿಗಳು ✍? ಝುಬೈರ್ ಹಳೆನೇರಂಕಿ (CRPF ಯೋಧ)

(ನ್ಯೂಸ್ ಕಡಬ) newskadaba.com ಜಮ್ಮು ಕಾಶ್ಮೀರ, ಜೂ.20. ಜಮ್ಮು ಕಾಶ್ಮೀರ ಭಾರತದ ಸ್ವರ್ಗ ಅಂತಾನೇ ಹೇಳಬಹುದು. ಆದರೆ ಇವತ್ತಿನ ದಿನಗಳಲ್ಲಿ ಕಾಶ್ಮೀರವು ಅತ್ಯಂತ ಚರ್ಚಿತವಾದ ಒಂದು ರಾಜ್ಯವಾಗಿದೆ. ಏಕೆಂದರೆ ಎಲ್ಲರ ಮನಸ್ಸಲ್ಲೂ ಇಲ್ಲಿನ ಸರ್ಕಾರ ಹಾಗೂ ಸೈನಿಕರು ಕಾಶ್ಮೀರದಲ್ಲಿನ ಅಮಾಯಕರನ್ನು ಕೊಲ್ಲುತ್ತಿದ್ದಾರೆ. ಆದರೆ ಇಲ್ಲಿ ನಡೆಯುತ್ತಿರುವ ವಾಸ್ತವ ಸತ್ಯನೇ ಬೇರೆ.

ಇಲ್ಲಿ ಸ್ವಾತಂತ್ರ್ಯಾ ನಂತರ ಗಲಭೆಗಳು, ದಂಗೆಗಳು ನಡೆಯುತ್ತಿದ್ದು, ಇದು ಭಾರತ ಪಾಕಿಸ್ತಾನ ಗಡಿ ಪ್ರದೇಶ ಆಗಿರುವುದರಿಂದ ಇಲ್ಲಿ ಗಲಭೆಗಳು ನಡೆಯುವುದು ಸಾಮಾನ್ಯ. ಕಾಶ್ಮೀರದ ವಿಷಯವನ್ನು ಅರಿತಷ್ಟರ ಮಟ್ಟಿಗೆ ಭಾರತದ ಸ್ವಾತಂತ್ರ್ಯಾ ನಂತರ ಇಲ್ಲಿನ ರಾಜ ಹರಿಸಿಂಗ್”ನ ಕೈಯಲ್ಲಿತ್ತು. ಹರಿಸಿಂಗ್ ಮನಸ್ಸಿನಲ್ಲಿ ಜಮ್ಮು ಕಾಶ್ಮೀರ ಸ್ವತಂತ್ರ ರಾಷ್ಟ್ರವಾಗಬೇಕು ಅನ್ನುವ ಚಿಂತನೆಯಲ್ಲಿದ್ದರು. ಆದರೆ ಇಲ್ಲಿನ ನ್ಯಾಶನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಜಮ್ಮು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕು ಅನ್ನುವ ಚಿಂತನೆಯಲ್ಲಿದ್ದಾರೆ. ಈ ವೇಳೆಯಲ್ಲಿ ದುಷ್ಟ ದೇಶ ಪಾಕಿಸ್ತಾನದ ಕುತಂತ್ರದಿಂದ ಬ್ರಿಟೀಷರು ಕಾಶ್ಮೀರದ ಮೇಲೆ ದಾಳಿ ಮಾಡುತ್ತಾರೆ, ಆಗ ರಾಜ ಹರಿಸಿಂಗ್ ಭಾರತದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ರವರೊಂದಿಗೆ ಭಾರತದ ಮಿಲಿಟರಿ ಪಡೆಯ ಸಹಾಯ ಚಾಚುತ್ತಾರೆ. ಆಗ ನೆಹರೂರವರು ಕಾಶ್ಮೀರಕ್ಕೆ ಭಾರತದ ಸೇನೆಯನ್ನು ನಿಯೋಜಿಸಿ ಬ್ರಿಟೀಷರನ್ನು ಓಡಿಸಿ ಗಡಿಯಲ್ಲಿ ಸೇನೆಯನ್ನು ಭದ್ರಮಾಡುತ್ತಾರೆ. ಆ ನಂತರ ಇದನ್ನೇ ನೆಪ ಮಾಡಿಕೊಂಡು ಕಾಶ್ಮೀರದ ಜನತೆಯನ್ನು ಭಾರತದ ವಿರುದ್ಧ ಎತ್ತಿ ಕಟ್ಚುವುದಕ್ಕೋಸ್ಕರ ಪ್ರತ್ಯೇಕವಾದಿ ಸಂಘಟನೆಯನ್ನು ಕಟ್ಟಿಕೊಂಡು ಇದರಲ್ಲಿ ಪ್ರಮುಖವಾಗಿ ಸೈಯ್ಯದ್ ಅಲಿ ಷಾ ಜೀಲಾನಿ, ಮೀರ್ ಸಾದಿಕ್ ಅಂತವರು ಭಾರತದ ಸೇನೆಯ ಮೇಲೆ ಕಲ್ಲು ಹೊಡೆಯುವುದು ಅವಮಾನಿಸುವುದು ಮಾಡುತ್ತಾರೆ.

Also Read  ಪುತ್ತೂರು: ಕೊಟ್ಟ ಸಾಲ ಕೇಳಿದ ಕ್ಲೀನರ್ ➤ ಅರ್ಧದಲ್ಲೇ ಇಳಿಸಿಹೋದ ಚಾಲಕ..!

ಇಲ್ಲಿನ ಜನ 75% ಪಾಕಿಸ್ತಾನ ಬೆಂಬಲಿಗರು ಹಾಗೂ 25% ಭಾರತವನ್ನು ಗೌರವಿಸುತ್ತಾರೆ. ಇನ್ನು ಸಿಯಾಚಿನ್-60° ತಾಪಮಾನ ಇರುವ ಗಡಿಯಿಂದ ಪಾಕ್ ಉಗ್ರರು ಭಾರತದ ಒಳ ನುಸುಳಿ ಇಲ್ಲಿ ವಿಧ್ವಂಸಕ ಕೃತ್ಯವೆಸಗುತ್ತಿದ್ದು, ಇವರನ್ನು ಕಾಶ್ಮೀರದ ಜನತೆ ಸಂಪೂರ್ಣವಾಗಿ ಬೆಂಬಲಿಸುತ್ತಾರೆ ಮತ್ತು ಇಲ್ಲಿನ ನವ ಯುವಕರನ್ನು ಭಯೋತ್ಪಾದನೆಯ ಕಡೆಗೆ ಪ್ರೇರೇಪಿಸುತ್ತಾರೆ. ಇನ್ನೂ ಹೇಳಬೇಕಾದರೆ ತುಂಬಾ ವಿಷಯ ಇದೆ. ಕಳೆದ ಕೆಲವು ದಿನಗಳ ಶ್ರೀನಗರದ ಬೆಮಿನ ಎನ್ನುವ ಪ್ರದೇಶದಲ್ಲಿ CRPF ನ 28 ಬೆಟಾಲಿಯನ್ ಕರ್ತವ್ಯದಲ್ಲಿರಬೇಕಾದರೆ ಶುಕ್ರವಾರ ಜುಮ್ಮಾ ನಮಾಜಿನಿಂದ ಹೊರಬರುವ ಸುಮಾರು 500 ರಷ್ಟು ಯುವಕರು CRPF ನ ಕಾರಿನ ಮೇಲೆ ದಾಳಿ ಮಾಡುತ್ತಾರೆ. ಈ ಕಾರಿನಲ್ಲಿ CRPF ನ ಕಮಾಂಡೊ ಆಫೀಸರ್ ಸೇರಿ 5 ಜನ ಯೋಧರಿದ್ದರು. ಯುವಕರು ಕಲ್ಲು ಹೊಡೆಯುವುದನ್ನೂ ಲೆಕ್ಕಿಸದೆ ನಿಧಾನವಾಗಿ ಗಾಡಿಯಲ್ಲಿ ಜನ ಜಂಗುಳಿಯಿಂದ ತಪ್ಪಿಸುವ ಸಮಯದಲ್ಲಿ 2 ಯುವಕರು ಕಾರಿನ ಎದುರು ಬಂದು ಮಲಗಿತ್ತಾರೆ. CRPF ನ ವಾಹನದ ಚಾಲಕ ಕಾರನ್ನು ನಿಲ್ಲಿಸಿದ್ದೇ ಆದಲ್ಲಿ ವಾಹನದಲ್ಲಿದ್ದ 6 ಮಂದಿ ಯೋಧರನ್ನು ಕೊಂದು ಅವರಲ್ಲಿದ್ದ ರೈಫಲ್’ಗಳನ್ನು ದೋಚುತ್ತಿದ್ದರು. ಈ ಭಯದಿಂದ ಡ್ರೈವರ್ ಯುವಕರ ಮೇಲೆಯೇ ಕಾರನ್ನು ಚಲಾಯಿಸುತ್ತಾನೆ. ಇದರಲ್ಲಿ ಒಬ್ಬ ಯುವಕ ಸಾಯುತ್ತಾನೆ ಹಾಗೂ CRPF ಡ್ರೈವರ್ ಮೇಲೆ ಕೇಸನ್ನು ದಾಖಲಿಸುತ್ತಾರೆ.

Also Read  ಕೊಡಿಂಬಾಳ ನವಪ್ರೀಯ ಪ್ರೇಂಡ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಇಲ್ಲಿ ನಾವು ತಿಳಿಯಬೇಕಾದದ್ದು ಮಿಲಿಟರಿ ಆಗಲಿ CRPF ಆಗಲಿ ಏನೋ ಯುವಕರು ಸ್ವತಃ ಬಂದು ಕಾರಿನ ಮೇಲೆ ಕಲ್ಲು ಹೊಡೆಯುವಾಗ ಚಾಲಕ ಏನು ಮಾಡಬೇಕು? ಇಷ್ಟಾದರೂ ಮಿಲಿಟರಿಯನ್ನು ದೂರುವುದು, ಯೋಧರ ಮೇಲೆ ಪ್ರಕರಣ ದಾಖಲಿಸುವುದು ಎಷ್ಟರ ಮಟ್ಟಿಗೆ ಸರಿ…? ಯಾವತ್ತೂ ಸೇನೆ ಅಮಾಯಕರನ್ನು ಕೊಲ್ಲಲ್ಲ. ಅಮಾಯಕರನ್ನು ಕೊಲ್ಲುವುದಾದರೆ ಕಾರಿನ ಮೇಲೆ ಕಲ್ಲು, ಗ್ರೇನೆಟ್ ಬಿಸಾಡುವಾಗ ಗುಂಡು ಹೊಡೆಯಬಹುದಿತ್ತು ಆದರೆ ಸೇನೆಯು ತಾಳ್ಮೆಯಿಂದ ಇಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಾ ಇದೆ. ಶ್ರೀನಗರ ಅನ್ನೋ ಒಂದು ಪ್ರದೇಶವೊಂದು ಭಾರತದ ಪ್ರವಾಸಿ ತಾಣವಾಗಿದ್ದು, ಆದರೆ ಇಲ್ಲಿ ಕಲ್ಲು ತೂರಾಟ ಮತ್ತು ಗಲಭೆಯಿಂದಾಗಿ ವರ್ಷದ 6 ತಿಂಗಳು ಬಂದ್ ಇರುತ್ತದೆ. ಇಲ್ಲಿನ ಅಭಿವೃದ್ಧಿ ಇತರ ರಾಜ್ಯಕ್ಕೆ ಹೋಲಿಸಿದರೆ ಸುಮಾರು 25 ವರ್ಷ ಹಿಂದಿದೆ. ನಾನು ಎಲ್ಲಾ ಜನತೆಗೆ ಹೇಳಬಯಸುವುದು ಯಾವುದೋ ಮಾಧ್ಯಮದಲ್ಲಿ ಬಂದದ್ದು ಅಥವಾ ಯಾರೋ ಹೇಳಿದ್ದನ್ನು ಚಿಂತಿಸದೇ ತಾವೇ ಸ್ವತಃ ಕಾಶ್ಮೀರಕ್ಕೆ ಭೇಟಿ ಕೊಟ್ಟು ಇಲ್ಲಿನ ಪರಿಸ್ಥಿಯನ್ನು ಅವಲೋಕಿಸಿದರೆ ಇಲ್ಲಿನ ನೈಜ ಸ್ಥಿತಿ ಅರಿವಾಗಬಹುದು

– ಝುಬೈರ್ ಹಳೆನೇರಂಕಿ (ಸಿಆರ್ ಪಿಎಫ್)
ಕರಣ್ ನಗರ್, ಶ್ರೀನಗರ – ಜಮ್ಮು ಕಾಶ್ಮೀರ

Also Read  ಬಂಟ್ವಾಳ: ಭಜರಂಗದಳ ಮುಖಂಡನ ಮೃತದೇಹ ಪತ್ತೆ ಪ್ರಕರಣ..! ➤ ಸ್ಥಳಕ್ಕೆ ಎಸ್ಪಿ ಹೃಷಿಕೇಶ್ ಭಗವಾನ್ ಸೋನಾವಣೆ ಭೇಟಿ

error: Content is protected !!
Scroll to Top