ಬದುಕು ಕಟ್ಟಿಕೊಟ್ಟ ಜೆಸಿಬಿಯಲ್ಲೇ ದಿಬ್ಬಣ ಹೊರಟ ಪುತ್ತೂರಿನ ನವದಂಪತಿ ► ‘ಜೆಸಿಬಿ’ ಮಣ್ಣು ಅಗೆಯಲು ಜೈ, ದಿಬ್ಬಣ ತೆರಳಲು ಸೈ ಎಂದ ಚೇತನ್

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.19. ಮದುವೆಯ ಸಂದರ್ಭದಲ್ಲಿ ಮರೆಯಲಾಗದ ರೀತಿಯಲ್ಲಿ ವಿಭಿನ್ನವಾಗಿ ಏನಾದರೂ ಮಾಡುವುದನ್ನು ಹೆಚ್ಚಾಗಿ ನಾವು ಕಾಣುತ್ತೇವೆ. ಆದರೆ ಜೀವನ ಕಟ್ಟಿಕೊಟ್ಟ ಜೆಸಿಬಿಯಲ್ಲಿಯೇ ನವಜೋಡಿಯೊಂದು ಮದುವೆ ದಿಬ್ಬಣ ಹೊರಟ ಚಿತ್ರವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೆಸಿಬಿ ಆಪರೇಟರ್ ವೃತ್ತಿಯಲ್ಲಿರುವ ಪುತ್ತೂರಿನ ಸಂಟ್ಯಾರು ನಿವಾಸಿ ಚೇತನ್ ತಿಂಗಳಾಡಿಯ ಮಮತಾರೊಂದಿಗೆ ಹಸಮಣೆಗೆ ಕಾಲಿಟ್ಟಿದ್ದು, ಕಾರ್ಯಕ್ರಮಗಳೆಲ್ಲಾ ಮುಗಿದ ಕೂಡಲೇ ತನಗೆ ಬದುಕು ಕಟ್ಟಿಕೊಟ್ಟ ಜೆಸಿಬಿಯಲ್ಲೇ ದಿಬ್ಬಣ ಹೊರಟು ಜೆಸಿಬಿ ವಾಹನವು ಮಣ್ಣು ಅಗೆಯಲು ಮಾತ್ರವಲ್ಲ, ದಿಬ್ಬಣಕ್ಕೂ ಸಿದ್ಧ ಎಂದು ತೋರಿಸಿಕೊಟ್ಟಿದ್ದಾರೆ. ಸ್ನೇಹಿತರೆಲ್ಲಾ ಸೇರಿ ಜೆಸಿಬಿಯನ್ನು ಹೂ ಹಾಗೂ ಇತರ ಅಲಂಕಾರಿಕ ವಸ್ತುಗಳಿಂದ ಶೃಂಗರಿಸಿಟ್ಟಿದ್ದು, ಅದೇ ಜೆಸಿಬಿ ಮೂಲಕ ಹತ್ತಿ ಬಂದ ವಧು ವರರನ್ನು‌ ದಾರಿ ಯುದ್ದಕ್ಕೂ ಜನ ನೋಡಿ ನಿಬ್ಬೆರಗಾಗಿದ್ದಾರೆ. ಆದರೆ ಚೇತನ್ ಪಾಲಿಗೆ ಮಾತ್ರ ಜೆಸಿಬಿ ವಾಹನವೇ ಐಷಾರಾಮಿ ಕಾರಾಗಿತ್ತು.

Also Read  ಈ 5 ವಸ್ತುಗಳು ಮನೆಯಲ್ಲಿ ಇದ್ದರೆ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಶಾಶ್ವತ ಪರಿಹಾರ ಆಗುತ್ತದೆ

error: Content is protected !!
Scroll to Top