ಪುತ್ತೂರು: ಸ್ಕಿಲ್ ಗೇಮ್ ಹೆಸರಿನಲ್ಲಿ ನಡೆಯುತ್ತಿದ್ದ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ ► ಮೂವತ್ತಕ್ಕೂ ಹೆಚ್ಚು ಜನರ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.19. ಸ್ಕಿಲ್ ಗೇಮ್ ನೆಪದಲ್ಲಿ ಅಕ್ರಮವಾಗಿ ಜುಗಾರಿ ನಡೆಸುತ್ತಿದ್ದ ಹೈಟೆಕ್ ಕೇಂದ್ರವೊಂದಕ್ಕೆ ದಾಳಿ ನಡೆಸಿರುವ ಪೊಲೀಸರು ಸಿಬ್ಬಂದಿ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಘಟನೆ ಸೋಮವಾರ ತಡರಾತ್ರಿ ಪುತ್ತೂರಿನಲ್ಲಿ ನಡೆದಿದೆ.

ಕಳೆದ ಕೆಲವು ತಿಂಗಳಿನಿಂದ ಪುತ್ತೂರಿನ ಬೊಳುವಾರು ಶಾಲೆಯ ಮುಂಭಾಗದ ಪ್ರತಿಷ್ಠಿತ ಕಟ್ಟಡದಲ್ಲಿ ಹೈಕೋರ್ಟ್ ನ ಆದೇಶವಿದೆ ಎನ್ನುವ ದಾಖಲೆಯನ್ನು ತೋರಿಸಿ ರಾಜಾರೋಷವಾಗಿ ಸ್ಕಿಲ್ ಗೇಮ್ ನಡೆಯುತ್ತಿತ್ತೆನ್ನಲಾಗಿದ್ದು, ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಡಾ.ರವಿಕಾಂತೇಗೌಡ ರವರ ನಿರ್ದೇಶನದಲ್ಲಿ ಪುತ್ತೂರು ಪೊಲೀಸರು ದಾಳಿ ನಡೆಸಿ ಮೂವರತ್ತಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

Also Read  ಮಂಗಳೂರನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಗೃಹಸಚಿವ ಪರಮೇಶ್ವರ್ ಸೂಚನೆ

error: Content is protected !!
Scroll to Top