ಕೈಕಂಬಕ್ಕೆ ಮತ್ತೆ ಕಾಲಿಟ್ಟರೇ ನಕ್ಸಲರು…? ► ಭಾಗೀಮಲೆ ರಕ್ಷಿತಾರಣ್ಯದಲ್ಲಿ ಸಂಚರಿಸಿದ ಗುಮಾನಿಯಿಂದ ಆತಂಕದಲ್ಲಿ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17. ಇಲ್ಲಿಗೆ ಸಮೀಪದ ಭಾಗಿಮಲೆ ಮೀಸಲು ಅರಣ್ಯದ ಭಾಗ್ಯ ಎಂಬಲ್ಲಿ ಶನಿವಾರ ತಡರಾತ್ರಿ ಶಂಕಿತ ನಕ್ಸಲರು ಸಂಚಾರ ನಡೆಸಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

ಸ್ಥಳೀಯವಾಗಿ ಈ ಕುರಿತು ವದಂತಿ ಹಬ್ಬಿದ್ದು ಈ ಭಾಗದಲ್ಲಿ ಎಎನ್ಎಫ್ ತಂಡವು ರವಿವಾರ ಬೆಳಗ್ಗೆ ಕೂಂಬಿಂಗ್ ಆರಂಭಿಸಿದೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲ್ ನಿಗ್ರಹ ಸ್ಕ್ವಾಡ್ ಜಂಟಿಯಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದವು. ಈ ಕಾರಣಕ್ಕಾಗಿ ಭಾಗೀಮಲೆ ಮೀಸಲು ಅರಣ್ಯದ ಭಾಗ್ಯ ಮೂಲಕ ನಕ್ಸಲರು ಕಾಡಿಂದ ಇಳಿದು ಪರಾರಿಯಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಪೊಲೀಸ್ ಮೂಲಗಳು ಮಾತ್ರ ಇದನ್ನು ಇನ್ನೂ ಖಚಿತ ಪಡಿಸಿಲ್ಲ.

Also Read  ಮುಕ್ಕೂರು ಕುಂಡಡ್ಕ ;ಸೆ. 2 ರಂದು ವಿದ್ಯಾರ್ಥಿಗಳಿಗೆ ಸ್ಪರ್ಧೆ

error: Content is protected !!
Scroll to Top