ಕುಸಿತದ ಭೀತಿಯಲ್ಲಿ ಕೆಮ್ಮಾರ ಸೇತುವೆಯ ಪಾರ್ಶ್ವ ► ಸಂಭಾವ್ಯ ಅಪಾಯವನ್ನು ತಪ್ಪಿಸುವರೇ ಸಂಬಂಧಪಟ್ಟ ಅಧಿಕಾರಿಗಳು..!!

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಸೇತುವೆಯ ಒಂದು ಪಾರ್ಶ್ವದ ಕಲ್ಲುಗಳು ನೀರಿನ ಹೊಡೆತಕ್ಕೆ ಸಿಲುಕಿದ್ದು, ಕುಸಿತದ ಭೀತಿಯನ್ನು ಎದುರಿಸುತ್ತಿದೆ.

ಹಲವು ಅಪಘಾತಗಳು ನಡೆದು ಕೆಲವು ಪ್ರಾಣಹಾನಿ ಸಂಭವಿಸಿದ್ದ ಈ ಸೇತುವೆಯ ಸಂಪರ್ಕಕ್ಕಾಗಿ ಹಾಕಲಾಗಿದ್ದ ಕಲ್ಲುಗಳು ನೀರಿನ ಸೆಳೆತಕ್ಕೆ ಸಿಲುಕಿ ಕುಸಿಯುವ ಸ್ಥಿತಿಯಲ್ಲಿದೆ. ಕರಾವಳಿ ಪ್ರದೇಶದಲ್ಲಿ ಮಳೆಯ ಪ್ರಮಾಣವು ಹೆಚ್ಚಿದಂತೆ ನದಿಯಲ್ಲಿ ನೀರಿನ ಹರಿವು ಕೂಡಾ ಹೆಚ್ಚಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಈ ಸೇತುವೆಯ ಫೋಟೊವನ್ನು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಅದೀಗ ವೈರಲ್ ಆಗಿದೆ. ಹೆಚ್ಚಿನ ಅನಾಹುತ ಉಂಟಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ

Also Read  ಜಲಜೀವನ್ ಮಿಷನ್- ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ

error: Content is protected !!
Scroll to Top