ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸದ್ದಕ್ಕೆ ಬೇಸತ್ತ ಮಹಿಳೆ ► ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.17. ಮಕ್ಕಳನ್ನು ಕಾನ್ವೆಂಟ್ ಶಾಲೆಗೆ ಸೇರಿಸಲು ಆರ್ಥಿಕ ಸಂಕಷ್ಟ ಇರುವುದರಿಂದ ಸರಕಾರಿ ಶಾಲೆಗೆ ಕಳುಹಿಸೋಣ ಎಂದುದಕ್ಕೆ ಮಹಿಳೆಯೋರ್ವರು ತನ್ನ ಮೂವರು ಮಕ್ಕಳನ್ನು ಕೆರೆಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರು ಮಾಸ್ತಿ ಠಾಣಾ ವ್ಯಾಪ್ತಿಯ ನಕ್ಕನಹಳ್ಳಿ ನಿವಾಸಿ ಪಾರ್ವತಮ್ಮ(25), ತನ್ನ ಮಕ್ಕಳಾದ ಜೀವನ್(7), ಚಂದನ(5) ಹಾಗೂ ಅಕ್ಷಯ್(3)ರನ್ನು ಕೆರೆಗೆ ದೂಡಿಹಾಕಿ ಬಳಿಕ ತಾನೂ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಬೇಕೆನ್ನುವ ಹಠದಿಂದ ಮಂಜುನಾಥ್ ಜತೆ ಜಗಳವಾಡಿದ್ದ ಪಾರ್ವತಮ್ಮ, ಸಿಟ್ಟಿನಿಂದ ಈ ಕೃತ್ಯ ಎಸಗಿದ್ದಾಳೆಂದು ತಿಳಿದುಬಂದಿದೆ. ಮಕ್ಕಳನ್ನು ಹೊರಗೆ ಕರೆದೊಯ್ಯುವ ನೆಪದಲ್ಲಿ ಕೆರೆಯ ಬಳಿ ಬಂದು ಮಕ್ಕಳನ್ನು ನೀರಿಗೆ ದೂಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Also Read  ಸುಳ್ಯ: ತೋಡಿಗೆ ಉರುಳಿಬಿದ್ದ ಬಸ್ ➤ ಹಲವರಿಗೆ ಗಾಯ

error: Content is protected !!
Scroll to Top