ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆ ► ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಕೂಂಬಿಂಗ್ ಆರಂಭ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.16. ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಮೂವರು ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದ ಹಿನ್ನೆಲೆಯಲ್ಲಿ ಶನಿವಾರದಂದು ನಕ್ಸಲ್ ನಿಗ್ರಹ ದಳದಿಂದ ಕೂಂಬಿಂಗ್ ಆರಂಭಿಸಲಾಗಿದೆ.

ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ನಿವಾಸಿ ಜಯರಾಮ್ ಎಂಬವರ ಮನೆಯ ರಬ್ಬರ್ ಟ್ಯಾಪಿಂಗ್ ಕೆಲಸಗಾರ ಕೇರಳ ಮೂಲದ ಥಾಮಸ್.ಎ.ಜೆ. ಎಂಬವರು ಗುರುವಾರ ರಾತ್ರಿ ಊಟಕ್ಕೆ ಕುಳಿತಿರುವಾಗ ಮೂವರು ಶಂಕಿತ ನಕ್ಸಲರು ಮನೆ ಒಳಗೆ ಬಂದು ಬಂದೂಕನ್ನು ತೋರಿಸಿ ತನಗೆಂದು ಮಾಡಿಟ್ಟಿದ್ದ ಅಡುಗೆಯನ್ನು ತೆಗೆದುಕೊಂಡು ಮನೆಯ ಹೊರಗೆ ಬಂದು ವರಾಂಡದಲ್ಲಿ ಊಟ ಮಾಡಿ ಐದು ನಿಮಿಷಗಳಲ್ಲಿ ಹೋಗಿದ್ದರು. ಪಿಸ್ತೂಲ್ ಹಾಗೂ ಕೋವಿಗಳನ್ನು ಹಿಡಿದುಕೊಂಡಿದ್ದರಿಂದ ಹೆದರಿದ ಥಾಮಸ್ ರವರು ಪೊಲೀಸರಿಗೆ ಮಾಹಿತಿ‌ ನೀಡಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯವರು ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

Also Read  ಕಡಬ: ಮನೆಮಂದಿ ಮಲಗಿದ್ದ ವೇಳೆ ಒಳನುಗ್ಗಿದ ಕಳ್ಳರು ➤ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

error: Content is protected !!
Scroll to Top