ಮಂಗಳೂರು: ಗೃಹರಕ್ಷಕ ದಳ ಸೇರ್ಪಡೆಗೆ ಆಸಕ್ತ ಪುರುಷರಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.16. ಮಂಗಳೂರು, ಮುಲ್ಕಿ, ಪಣಂಬೂರು, ಮೂಡಬಿದಿರೆ, ಸುರತ್ಕಲ್ ಈ ಸ್ಥಳಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಗೃಹರಕ್ಷಕರಾಗಿ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ಪುರುಷ ಅಭ್ಯರ್ಥಿಗಳಿಂದ ಮಾತ್ರ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

20 ವರ್ಷ ಮೇಲ್ಪಟ್ಟು 50 ವರ್ಷಗಳ ಒಳಗಿನ ವಯಸ್ಸಿನವರಾಗಿರಬೇಕು. ಅರ್ಜಿಯನ್ನು ಜಿಲ್ಲಾ ಗೃಹರಕ್ಷಕ ದಳ ಕಛೇರಿ, ಮೇರಿಹಿಲ್, ಮಂಗಳೂರು ಇಲ್ಲಿ ಕಛೇರಿ ಸಮಯ ಬೆಳಿಗ್ಗೆ 10 ರಿಂದ ಸಂಜೆ 5.30ರ ಒಳಗೆ ಪಡೆದುಕೊಳ್ಳಬಹುದು. ಕಛೇರಿಯ ದೂರವಾಣಿ ಸಂಖ್ಯೆ : 0824-2220562. ಅರ್ಜಿ ಸ್ವೀಕರಿಸುವ ಕೊನೆಯ ದಿನ ಜೂನ್ 30. (ಪುರುಷ ಅಭ್ಯರ್ಥಿಗಳಿಗೆ ಮಾತ್ರ) ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ| ಮುರಳೀ ಮೋಹನ್ ಚೂಂತಾರುರವರು ಪ್ರಕಟಣೆ ತಿಳಿಸಿದೆ.

Also Read  ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಚಾಲನೆ

error: Content is protected !!
Scroll to Top