(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.14. ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ – ಸಿರಿಬಾಗಿಲು ಮಧ್ಯದ ರೈಲ್ವೇ ಹಳಿಯ ಮೇಲೆ ಮಣ್ಣು ಬಿದ್ದ ಪರಿಣಾಮ ಬೆಂಗಳೂರು -ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.
ಸುಬ್ರಹ್ಮಣ್ಯ-ಸಿರಿಬಾಗಿಲು ಮಧ್ಯಭಾಗದಲ್ಲಿ ಹಠಾತ್ ಭೂಕುಸಿತ ಉಂಟಾಗಿ ರೈಲ್ವೆ ಹಳಿಯ ಮೇಲೆ ಮಣ್ಣು ಬಿದ್ದಿದೆ. ಇದರಿಂದಾಗಿ 10.50ಕ್ಕೆ ಮಂಗಳೂರಿನಿಂದ ಹೊರಟಿದ್ದ ಕಾರವಾರ – ಬೆಂಗಳೂರು ಹಗಲು ರೈಲು ಸುಬ್ರಹ್ಮಣ್ಯ ರೋಡ್ ವರೆಗೆ ಸಂಚರಿಸಿ ಮುಂದಿನ ಪ್ರಯಾಣವನ್ನು ರದ್ದುಗೊಳಿಸಿದೆ. ಬೆಂಗಳೂರಿನಿಂದ ಮಂಗಳೂರಿನತ್ತ ಹೊರಟಿದ್ದ ರೈಲು ಸಕಲೇಶಪುರವರೆಗೆ ಬಂದಿದ್ದು, ಪ್ರಯಾಣ ಮೊಟಕುಗೊಳಿಸಿದ್ದು, ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.