ಬಲ್ಯ: ನಾಪತ್ತೆಯಾಗಿದ್ದ ಯುವತಿಯನ್ನು ಪತ್ತೆಹಚ್ಚಿದ ಪೊಲೀಸರು

ಕಡಬ, ಜೂ.12. ಕೆಲಸಕ್ಕೆಂದು ತೆರಳಿ ನಾಪತ್ತೆಯಾದ್ದ ಯುವತಿಯನ್ನು ಕಡಬ ಪೊಲೀಸರು ಮಂಗಳವಾರದಂದು ಪತ್ತೆಹಚ್ಚಿ ಕರೆದುಕೊಂಡು ಬಂದಿದ್ದಾರೆ.

ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಬಲ್ಯ ಗ್ರಾಮದ ದೇರಾಜೆ ಪನ್ಯಾಡಿ ನಿವಾಸಿ ದಿ.ಗುರುವ ಎಂಬವರ ಪುತ್ರಿ ಕು|ಸುಂದರಿ(30)‌ ಎಂಬಾಕೆ ಕಳೆದ ಸುಮಾರು ಒಂದು ತಿಂಗಳ ಹಿಂದೆ ಕೆಲಸಕ್ಕೆಂದು ತೆರಳಿದ್ದು, ಆ ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿರುವುದಾಗಿ ಈಕೆಯ ತಾಯಿ ಚೋಮು ಕಡಬ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಕಡಬ ಪೊಲೀಸರು ಪೊಳಲಿ ಕೈಕಂಬ ಸಮೀಪದ ಮನೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ ಈಕೆಯನ್ನು ಮಂಗಳವಾರದಂದು ಪತ್ತೆಹಚ್ಚಿದ್ದಾರೆ.

Also Read  ಸೆ.21 ವಾರ್ಷಿಕ ಮಹಾಸಭೆ ➤ಕೇಂದ್ರ ಸಗಟು ಮಾರಾಟ ಸಂಘ

error: Content is protected !!
Scroll to Top