ನಂತೂರು: ಟೆಂಪೋ – ಡಿಯೋ ಢಿಕ್ಕಿ ► ಪತಿ – ಪತ್ನಿ ಇಬ್ಬರೂ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.12. ಟೆಂಪೋ ಮತ್ತು ಹೋಂಡಾ ಡಿಯೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದಂಪತಿ ಮೃತಪಟ್ಟ ದಾರುಣ ಘಟನೆ ನಗರದ ನಂತೂರು ಸರ್ಕಲ್ ನಲ್ಲಿ ಮಂಗಳವಾರ ಸಂಜೆ‌ ನಡೆದಿದೆ.

ಮೃತ ದುರ್ದೈವಿಗಳನ್ನು ಉಡುಪಿ ಜಿಲ್ಲೆಯ ಕಾಪು ನಿವಾಸಿ ಮೊಹಮ್ಮದ್ ಸಮೀರ್ (30) ಹಾಗೂ ಅವರ ಪತ್ನಿ ಬೆಳ್ತಂಗಡಿಯ ಸಮ್ರೀನ್(26) ಎಂದು ಗುರುತಿಸಲಾಗಿದೆ. ಇವರು ಮಂಗಳವಾರ ಸಂಜೆ ತಮ್ಮ ದ್ವಿಚಕ್ರ ವಾಹನದಲ್ಲಿ ಕಾಪುವಿನಿಂದ ಬೆಳ್ತಂಗಡಿಗೆ ತೆರಳುತ್ತಿದ್ದಾಗ ನಂತೂರ್ ಸರ್ಕಲ್ ಬಳಿ ಗೂಡ್ಸ್ ಟೆಂಪೋವೊಂದು ಇವರಿದ್ದ ದ್ವಿಚಕ್ರ ವಾಹನಕ್ಕೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಸಮ್ರೀನ್ ಸ್ಥಳದಲ್ಲೇ ಮೃತಪಟ್ಟರೆ, ಸಮೀರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Also Read  How you can Activate microsoft Office 2024 Pro Plus or 365 free For Lifetime

error: Content is protected !!
Scroll to Top