ಬಂಟ್ವಾಳ: ಹಾಡುಹಗಲೇ ತಲವಾರು ದಾಳಿ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.11. ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರು ಹಾಡುಹಗಲೇ ಪರಸ್ಪರ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡ್ ನಲ್ಲಿ ಸೋಮವಾರದಂದು ನಡೆದಿದೆ.

ತುಳು ಚಿತ್ರನಟ, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸುರೇಂದ್ರ ಬಂಟ್ವಾಳರ ತಂಡದಲ್ಲಿ ಗುರುತಿಕೊಂಡಿದ್ದ ಯುವಕನೋರ್ವನಿಗೆ ಬಿಜೆಪಿ ಕಾರ್ಯಕರ್ತರ ತಂಡವೊಂದು ಫೇಸ್‍ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಭಾನುವಾರದಂದು ಸೆಲೂನ್ ಗೆ ನುಗ್ಗಿ ಹಲ್ಲೆ ನಡೆಸಿತ್ತೆನ್ನಲಾಗಿದೆ. ಇದೇ ವೈಷಮ್ಯದಲ್ಲಿ ಸೋಮವಾರದಂದು ಬಿ.ಸಿ.ರೋಡಿನ ಬಡ್ಡಕಟ್ಟೆಯ ಹೊಟೇಲೊಂದಕ್ಕೆ ಊಟಕ್ಕೆಂದು ತೆರಳಿದ್ದ ಬಿಜೆಪಿ ಕಾರ್ಯಕರ್ತರ ಜೊತೆಗೆ ಕಾಂಗ್ರೆಸ್ ನ ಸುರೇಂದ್ರ ಮತ್ತು ಅವರ ತಂಡ ತಲವಾರು ಹಿಡಿದು ಹೋಟೆಲ್ ಗೆ ಬಂದು ವಾಗ್ವಾದ ನಡೆಸಿದ್ದಾರೆ.

Also Read  ಕರ್ತವ್ಯದಲ್ಲಿದ್ದ ವೇಳೆ ದಿಢೀರ್ ಅಸ್ವಸ್ಥ ➤ ಕೊಣಾಜೆ ಠಾಣಾ ಹೆಡ್ ಕಾನ್ಸ್ಟೇಬಲ್, ಸವಣೂರು ಮೂಲದ ಜಗನ್ನಾಥ್ ನಿಧನ

ಈ ವೇಳೆ ಇತ್ತಂಡಗಳ ಮಧ್ಯೆ ಹಲ್ಲೆ ನಡೆದಿದೆಯೆನ್ನಲಾಗಿದ್ದು, ನಂತರ ಸುರೇಂದ್ರ ಹಾಡಹಗಲೇ ನಡುರಸ್ತೆಯಲ್ಲೇ ರೋಷಾವೇಷದಿಂದ ತಲವಾರು ಝಳಪಿಸಿದ್ದಾರೆ. ಈ ಸಂದರ್ಭದಲ್ಲಿ ಗಣೇಶ್ ಹಾಗೂ ಪುಷ್ಪರಾಜ್ ಎಂಬವರು ತಲವಾರು ದಾಳಿಗೊಳಗಾಗಿದ್ದು, ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿದ್ದೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

error: Content is protected !!
Scroll to Top