ನೆಟ್ಟಣ: ಸೇತುವೆ ಮುಳುಗಡೆ ► ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com ಕಡಬ, ಜೂ.11. ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಸಂಪರ್ಕ ಸೇತುವೆಯು ಮುಳುಗಡೆಗೊಂಡಿದ್ದು, ಹೆದ್ದಾರಿ ತಡೆ ಉಂಟಾಗಿದೆ.

ಇದರಿಂದಾಗಿ ದೂರದೂರುಗಳ ಯಾತ್ರಿಕರಿಗೆ ತೊಂದರೆಯುಂಟಾಗಿದೆ. ಬಸ್ಸು, ಲಾರಿ ಸೇರಿದಂತೆ ಘನ ವಾಹನಗಳ ಚಾಲಕರು ನೀರಿನ ಹರಿವು ಕಡಿಮೆಯಾಗುವವರೆಗೆ ರಸ್ತೆ ಬದಿಯಲ್ಲಿ ಕಾಯುತ್ತಿದ್ದಾರೆ. ಕಾರು, ಟೆಂಪೋ ಮೊದಲಾದ ವಾಹನಗಳು ಸುಂಕದಕಟ್ಟೆ, ಕೊಂಬಾರು, ಕೆಂಜಾಳ, ಕೈಕಂಬ ಮಾರ್ಗವಾಗಿ ಸುಬ್ರಹ್ಮಣ್ಯ ತೆರಳುವಂತಾಗಿದೆ.

Also Read  ಶಾಶ್ವತ ಸೇತುವೆಗಾಗಿ ಕಾದು ಸುಸ್ತಾದ ಕಡಬದ ಗ್ರಾಮಸ್ಥರು ► ಊರವರ ಶ್ರಮದಿಂದ ನಿರ್ಮಾಣವಾಯ್ತು 120 ಮೀ. ಉದ್ದದ ಸೇತುವೆ

error: Content is protected !!
Scroll to Top