ಕೊಯಿಲ: ಡೆಂಗ್ಯೂ ಜ್ವರಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಜೂ.10. ಡೆಂಗ್ಯೂ ಜ್ವರಕ್ಕೆ ಮಹಿಳೆಯೋರ್ವರು ಬಲಿಯಾಗಿರುವ ಘಟನೆ ಇಲ್ಲಿನ ಕೊಯಿಲದಲ್ಲಿ ಶನಿವಾರದಂದು ನಡೆದಿದೆ.

ಮೃತ ಮಹಿಳೆಯನ್ನು ಕೊಯಿಲ ಗ್ರಾಮದ ಏಣಿತಡ್ಕ ನಿವಾಸಿ ಶಿವರಾಮ ನಾಯ್ಕ ಎಂಬವರ ಪತ್ನಿ ಅಶ್ವಿತಾ(27) ಎಂದು ಗುರುತಿಸಲಾಗಿದೆ. ಇವರಿಗೆ ಬುಧವಾರದಂದು ಜ್ವರ ಕಾಣಿಸಿಕೊಂಡಿದ್ದು, ಸ್ಥಳೀಯವಾಗಿ ಚಿಕಿತ್ಸೆ ಪಡೆದು ಗುಣಮುಖರಾಗದ ಕಾರಣ ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಅಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗಿರುವುದಲ್ಲದೆ, ಜ್ವರದ ತೀವ್ರತೆ ಹೆಚ್ಚಾಯಿತು. ಬಳಿಕ ಅವರನ್ನು ಶುಕ್ರವಾರ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಕ್ತದೊತ್ತಡ ಕಡಿಮೆಯಾಗಿ ಹೃದಯಾಘಾತಕ್ಕೆ ಒಳಗಾಗಿ ಶನಿವಾರ ಸಂಜೆ ವೇಳೆಗೆ ಮಹಿಳೆ ಮೃತಪಟ್ಟಿದ್ದಾರೆ. ಇದು ಡೆಂಗ್ಯೂ ಜ್ವರ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೂಲತಃ ಬೆಳ್ತಂಗಡಿ ತಾಲೂಕಿನವರಾಗಿದ್ದ ಮೃತರನ್ನು ಏಣಿತಡ್ಕದ ಶಿವರಾಮ ಅವರಿಗೆ ಮೂರುವರೆ ವರ್ಷದ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಮೃತರು ಏಳು ತಿಂಗಳ ಹೆಣ್ಣು ಮಗುವನ್ನು ಅಗಲಿದ್ದಾರೆ.

Also Read  ಕಡಬದ ಶ್ರೀ ದುರ್ಗಾ ಪವರ್ ಸಿಸ್ಟಮ್ ನಲ್ಲಿ ದೀಪಾವಳಿ ವಿಶೇಷ ಆಫರ್ ➤ ಇನ್ವರ್ಟರ್ ವಿತ್ ಟ್ರಾಲಿ ಕೇವಲ 18 ಸಾವಿರ ರೂ., ಸೋಲಾರ್ ವಾಟರ್ ಹೀಟರ್ ಕೇವಲ 19 ಸಾವಿರ ರೂ.

error: Content is protected !!
Scroll to Top