ಇಚಿಲಂಪಾಡಿ: ರಸ್ತೆ ಬದಿಯ ತೋಡಿಗೆ ಇಳಿದ ಲಾರಿ

(ನ್ಯೂಸ್ ಕಡಬ) newskadaba.com ಕಡಬ, ಜೂ.10. ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ರಸ್ತೆ ಬದಿಯ ತೋಡಿಗೆ ಬಿದ್ದ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಯರಡ್ಕ ಕ್ರಾಸ್ ಬಳಿ ಭಾನುವಾರದಂದು ನಡೆದಿದೆ.

ನೆಲ್ಯಾಡಿಯಿಂದ ಇಚಿಲಂಪಾಡಿ ಕಡೆಗೆ ತೆರಳುತ್ತಿದ್ದ 709 ಲಾರಿ ಚಾಲಕನ ನಿಯಂತ್ರಣ ತಪ್ಪಿ ತೋಡಿಗಿಳಿದಿದ್ದು, ಲಾರಿಯಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ತೋಡಿಗೆ ನಿರ್ಮಿಸಲಾಗಿದ್ದ ತಡೆಗೋಡೆಯು ಕಳಪೆಯಾಗಿದ್ದು, ನಾಲ್ಕು ದಿನಗಳ ಹಿಂದೆ ಕಾರೊಂದು ಢಿಕ್ಕಿ ಹೊಡೆದುದರಿಂದಾಗಿ ತಡೆಗೋಡೆ ಕುಸಿದಿತ್ತು ಎನ್ನಲಾಗಿದೆ. ಇಚಿಲಂಪಾಡಿ ರಸ್ತೆಯಲ್ಲಿನ ಕಾಮಗಾರಿಯು ಕಳಪೆಯಾಗಿದೆ ಎನ್ನುವ ಬಗ್ಗೆ ಇಚಿಲಂಪಾಡಿಯ ನೀತಿ ತಂಡವು ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿತ್ತು.

Also Read  ಬಂಟ್ವಾಳ: ಪ್ರಪಾತಕ್ಕೆ ಉರುಳಿ ಬಿದ್ದ ಬೈಕ್ ➤ ಹಿಂಬದಿ ಸವಾರ ಮೃತ್ಯು

error: Content is protected !!
Scroll to Top