ಕರಾವಳಿಯಲ್ಲಿ ಮಹಾ’ಮಳೆ’ ► ಕಾರು ಚರಂಡಿಗಿಳಿದು ವೃದ್ಧೆ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.09. ಕಾರೊಂದು ಚರಂಡಿಗೆ ಬಿದ್ದುದರಿಂದಾಗಿ ವೃದ್ಧ ಮಹಿಳೆಯೋರ್ವರು ಮೃತಪಟ್ಟ ಘಟನೆ ಮುಲ್ಕಿ ಸಮೀಪದ ಕೊಲ್ನಾಡು ಎಂಬಲ್ಲಿ ಶನಿವಾರದಂದು ನಡೆದಿದೆ.

ಕರಾವಳಿ ಪ್ರದೇಶದಲ್ಲಿ ತೀವ್ರ ಮಳೆ ಸುರಿಯುತ್ತಿರುವುದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಬಪ್ಪನಾಡು ನಿವಾಸಿ ಅಪ್ಪಿ ಶೇರಿಗಾರ್ತಿ(83) ಮೃತಪಟ್ಟಿದ್ದು, ಚಾಲಕ ಸೇರಿದಂತೆ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಉತ್ತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಮಹಿಳಾ ಕುಸ್ತಿ ಸ್ಪರ್ಧೆ - ಮೆಲ್ಕಾರ್ ಮಹಿಳಾ ಕಾಲೇಜಿನ ಸನಾ ಸುಲ್ತಾನಳಿಗೆ ಚಿನ್ನದ ಪದಕ

error: Content is protected !!
Scroll to Top