ಮದುವೆಯಾಗುವುದಾಗಿ ನಂಬಿಸಿ ಇದೀಗ ವಂಚನೆ ► ಯುವತಿಯಿಂದ ಕಡಬ ಪೊಲೀಸರಿಗೆ ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.08. ಮದುವೆಯಾಗುವುದಾಗಿ ಮಾತುಕತೆ ನಡೆಸಿ ಕೊನೆಗೆ ಮದುವೆಯಾಗುವುದಿಲ್ಲವೆಂದು ವಂಚಿಸಿದ ಬಗ್ಗೆ ಯುವತಿಯೋರ್ವರು ಕಡಬ ಠಾಣೆಗೆ ದೂರು ನೀಡಿದ್ದಾರೆ.

ವಿದೇಶದಲ್ಲಿ ಉದ್ಯೋಗದಲ್ಲಿದ್ದ
ಪುತ್ತೂರು ತಾಲೂಕಿನ ಮುಂಡೂರು ರಾಘವೇಂದ್ರ ನಿಲಯ ನಿವಾಸಿ ಶೀನ ನಾಯ್ಕ್ ಎಂಬವರ ಪುತ್ರ ದಿವಾಕರ ನಾಯ್ಕ್ ಎಂಬಾತನಿಗೆ 2017 ಮಾರ್ಚ್ ನಲ್ಲಿ ಕಡಬ ಠಾಣಾ ವ್ಯಾಪ್ತಿಯ ಯುವತಿಯೊಂದಿಗೆ ಮದುವೆಯಾಗುವುದಾಗಿ ಮಾತುಕತೆ ನಡೆದಿತ್ತೆನ್ನಲಾಗಿದೆ. 2018 ರ ಮೇ ತಿಂಗಳಲ್ಲಿ ವಿದೇಶದಿಂದ ಬಂದ ದಿವಾಕರ ನಾಯ್ಕ್ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ್ದು, ಈ ಬಗ್ಗೆ ಯುವಕನ ಹೆತ್ತವರಲ್ಲಿ ವಿಚಾರಿಸಿದಾಗ ನೀವು ಹೇಳಿದಂತೆ ನಡೆದುಕೊಂಡಿಲ್ಲ. ಹೆಚ್ಚಿನ ಹಣ ಹಾಗೂ ಒಡವೆ ನೀಡಿಲ್ಲವೆಂಬ ಕಾರಣ ನೀಡಿ ಮದುವೆಗೆ ನಿರಾಕರಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ಯುವತಿ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪುತ್ತೂರು: ಹಿಂದು ಜಾಗರಣ ವೇದಿಕೆ ವತಿಯಿಂದ 100 ಬಡ ಕುಟುಂಬಕ್ಕೆ ಅಹಾರ ಸಾಮಾಗ್ರಿಗಳ ಕಿಟ್ ವಿತರಣೆ...

error: Content is protected !!
Scroll to Top