ಅಕ್ರಮ ಮರಳು ಅಡ್ಡೆಗೆ ದಾಳಿ ► ಭಾರೀ ಪ್ರಮಾಣದ 850 ಲೋಡ್ ಮರಳು ವಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.05. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳನ್ನು ಪತ್ತೆ ಹಚ್ಚಿರುವ ಪೊಲೀಸರು ಸುಮಾರು 850 ಲೋಡು ಅಕ್ರಮ ಮರಳನ್ನು ವಶಪಡಿಸಿಕೊಂಡಿದ್ದಾರೆ.

ಠಾಣಾ ವ್ಯಾಪ್ತಿಯ ಬಡಗುಳಿಪಾಡಿ, ಮೂಡುಪೆರಾರ್ ಗ್ರಾಮದ ಚರ್ಚ್ ಬಳಿ ಹಾಗೂ ಮೊಗರು ಗ್ರಾಮದ ನಾರ್ಲಪದವು ಎಂಬಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿ ಗೌಪ್ಯವಾಗಿ ಬಚ್ಚಿಡಲಾಗಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಸುಮಾರು 35 ಲಕ್ಷ ಮೌಲ್ಯದ ಅಕ್ರಮ ಮರಳನ್ನು ವಶಪಡಿಸಿಕೊಂಡರು.

ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ ವಿಪುಲ್ ಕುಮಾರ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪ ಆಯುಕ್ತರಾದ( ಕಾನೂನು ಮತ್ತು ಸುವ್ಯವಸ್ಥೆ) ಹನುಮಂತರಾಯ,(ಅಪರಾಧ ಮತ್ತು ಸಂಚಾರ) ಶ್ರೀಮತಿ ಉಮಾಪ್ರಶಾಂತ್ ರವರ ಮೇಲುಸ್ತುವಾರಿಯಲ್ಲಿ ಸಿಸಿಆರ್ಬಿ ಘಟಕದ ಸಹಾಯಕ ಪೊಲೀಸ್ ಆಯುಕ್ತರಾದ ಗೋಪಾಲಕೃಷ್ಣ ನಾಯಕ್ ಹಾಗೂ ಸಿಸಿಬಿ ಪೊಲೀಸ್ ನಿರೀಕ್ಷಕರಾದ ಕೆ. ಶ್ರೀನಿವಾಸ್ ರವರ ಮುಂದಾಳುತ್ವದಲ್ಲಿ ಸಿಸಿಬಿ ಎಸಿಪಿ ಗೋಪಾಲಕೃಷ್ಣ ನಾಯಕ್, ಸಿಸಿಆರ್ಬಿ ಪೊಲೀಸ್ ನಿರೀಕ್ಷಕರಾದ ಶ್ರೀನಿವಾಸ್, ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಪರಶಿವಮೂರ್ತಿ, ಸೈಬರ್ ಪೊಲೀಸ್ ಠಾಣೆಯ ನಿರೀಕ್ಷಕರಾದ ಶ್ರೀ ರಾಜಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಶ್ರೀ ಬಿ.ಕೆ ಮೂರ್ತಿ, ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಮುತ್ತಪ್ಪ ಮತ್ತು ದಿನೇಶ್ ಕುಮಾರ್ ಹಾಗೂ ಮಂಗಳೂರು ಸಿಸಿಬಿ ಘಟಕದ ಪಿಎಸ್ಐ ಕಬ್ಬಾಳ್ ರಾಜ್, ಶಶಿಧರ್ ಶೆಟ್ಟಿ, ಚಂದ್ರಶೇಖರ್, ಚಂದ್ರಹಾಸ್, ಚಂದ್ರ, ಸುಬ್ರಮಣ್ಯ, ರಾಮ ಪೂಜಾರಿ, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಆಶಿತ್ ಡಿಸೋಜಾ, ತೇಜ ಕುಮಾರ್, ರಿತೇಶ್, ಸೈಬರ್ ಪೊಲೀಸ್ ಠಾಣೆಯ ಕುಮಾರ್ ಹಾಗೂ ಬಜಪೆ ಪೊಲೀಸ್ ಠಾಣೆಯ ರಾಜೇಶ್, ಯೋಗೀಶ್, ಶ್ರೀ ಕೃಷ್ಣಪ್ಪ ರಾಥೋಡ್ ರವರು ಭಾಗವಹಿಸಿರುತ್ತಾರೆ.

Also Read  ಪಾಲೆತ್ತಡ್ಕ ಅಂಗನವಾಡಿ ► ಗರ್ಭಿಣಿ, ಬಾಣಂತಿಯರಿಗೆ ಊಟ ಬಡಿಸುವ ಮೂಲಕ ಮಾತೃಪೂರ್ಣ ಯೋಜನೆಗೆ ಚಾಲನೆ

 

 

error: Content is protected !!
Scroll to Top