ಇನ್ನೆರಡು ದಿನದಲ್ಲಿ ಭಾರೀ ಮಳೆಯ ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ ► ಮತ್ತೊಮ್ಮೆ ಪ್ರವಾಹದ ಭೀತಿಯಲ್ಲಿ ಕರಾವಳಿ

ಸಾಂದರ್ಭಿಕ ಚಿತ್ರ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ.05. ಭಾರೀ ಮಳೆಗೆ ಕರಾವಳಿಯು ತತ್ತರಿಸಿ ವಾರವಾಗುವುದರೊಳಗೆ ಇದೀಗ ಮುಂಗಾರಿನ ಪ್ರಭಾವದಿಂದ ಜೂನ್‌ 10 ರ ಬಳಿಕ ಕರಾವಳಿಯು ಮತ್ತೊಮ್ಮೆ ಪ್ರವಾಹದ ಭೀತಿಯನ್ನು ಎದುರಿಸುತ್ತಿದೆ.

ಈ ಬಗ್ಗೆ ಮುನ್ನೆಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ), ಜೂನ್‌ 7 ರ ಬಳಿಕ ಕೇರಳ, ಕರಾವಳಿ ಕರ್ನಾಟಕ ಸೇರಿದಂತೆ ಗೋವಾದಲ್ಲಿ ಭಾರೀ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಮಾಹಿತಿ ನೀಡಿದೆ. ಮುಂಬಯಿಯಲ್ಲಿ ಜೂನ್‌ ಆರರಿಂದ ಮಳೆಯಾಗಲಿದ್ದು, 8/9/10ರಂದು ಅದು ಜಡಿ ಮಳೆಯಾಗಿ ಪರಿವರ್ತನೆಯಾಗಲಿದೆ ಎಂದು ತಿಳಿಸಿದೆ.

Also Read  ಬಿಸಿಲಿನ ಬೇಗೆ ಬತ್ತಿ ಹೋಗುತ್ತಿರುವ ಕೆರೆ, ಬಾವಿಗಳಲ್ಲಿನ ನೀರು ► ಕುಡಿಯುವ ನೀರಿಗಾಗಿ ಪರದಾಟ - ಟ್ಯಾಂಕರ್ ನಲ್ಲಿ ನೀರು ಸಾಗಾಟ

error: Content is protected !!
Scroll to Top