ಐಶಾರಾಮಿ ಆಡಳಿತಕ್ಕೆ ಮೇಜರ್ ಸರ್ಜರಿ ► ಅನಗತ್ಯ ದುಂದುವೆಚ್ಚಕ್ಕೆ ಕತ್ತರಿ: ಕುಮಾರಸ್ವಾಮಿ ನಿರ್ಧಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.04. ಸರಕಾರದ ಬೊಕ್ಕಸಕ್ಕೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅನಗತ್ಯ ದುಂದು ವೆಚ್ಚಗಳನ್ನು ಕಡಿತಗೊಳಿಸಲು ನಿರ್ಧರಿಸಿದ್ದಾರೆ.

ಆರ್ಥಿಕ ಭದ್ರತೆ ಕಾಯ್ದುಕೊಳ್ಳುವ ಹಿತದೃಷ್ಟಿಯಿಂದ ಸರಕಾರದ ವತಿಯಿಂದ ತನಗೆ ಸಹಿತ ಯಾರಿಗೂ ವಿಶೇಷ ವಿಮಾನದ ಸೌಕರ್ಯವನ್ನು ಕಡಿತಗೊಳಿಸಲಾಗುವುದು. ತುರ್ತು ಸಂದರ್ಭ ಮಾತ್ರ ವಿಶೇಷ ವಿಮಾನ ಬಳಕೆಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸಿಎಂ ಬೆಂಗಾವಲು ಪಡೆಯನ್ನು ಕಡಿತಗೊಳಿಸಲು ಕುಮಾರಸ್ವಾಮಿ ನಿರ್ಧರಿಸಿದ್ದು, ಸಿಎಂ ಕಚೇರಿಯಲ್ಲೂ ಅನಗತ್ಯ ಸಿಬ್ಬಂದಿಗೆ ಗೇಟ್ ಪಾಸ್ ನೀಡಲು ತೀರ್ಮಾನ ಮಾಡಿದ್ದಾರೆ.

Also Read  ಪುತ್ತೂರು: ಆಸಿಡ್ ಸೇವಿಸಿ ವ್ಯಕ್ತಿ ಮೃತ್ಯು..!

error: Content is protected !!
Scroll to Top