ಬಂಟ್ವಾಳ: ಮಾವನಿಂದ ಅಳಿಯನ‌ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.02. ಮಾವನೇ ತನ್ನ ಅಳಿಯನನ್ನು ಕೊಲೆಗೈದಿರುವ ವಿಚಿತ್ರ ಘಟನೆ ಬಂಟ್ವಾಳದಲ್ಲಿ ಶನಿವಾರದಂದು ನಡೆದಿದೆ.

ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮದ ಕಟ್ಟದಪಡ್ಪು ನಿವಾಸಿ ಅಮನ್ನ ಪೂಜಾರಿ ತನ್ನ ಮಗಳ ಗಂಡ ರಮಾನಂದ(50) ಎಂಬವರನ್ನು ಬರ್ಬರವಾಗಿ ಕೊಂದಿದ್ದಾರೆ. ರಮಾನಂದರ ಪತ್ನಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸಾಂಸಾರಿಕ ಕಲಹ ಕೃತ್ಯಕ್ಕೆ ಕಾರಣವೆಂದು ಹೇಳಲಾಗಿದ್ದು, ನಿಖರವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು, ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನವಿದೆ ➤ ಡಾ.ಕುಮಾರ್

error: Content is protected !!
Scroll to Top