ಕಡಬದ ಪತ್ರಕರ್ತ ನಾಗರಾಜ್ ಎನ್.ಕೆ.ಯವರಿಗೆ ಪಿತೃ ವಿಯೋಗ

(ನ್ಯೂಸ್ ಕಡಬ) newskadaba.com ಕಡಬ, ಜೂ.02. ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಮೇಕಪ್ ಕಲಾವಿದ ವಿದ್ಯಾನಗರ ನಿವಾಸಿ ನಾರಾಯಣ ಭಂಡಾರಿ (70) ಅಲ್ಪಕಾಲದ ಅಸೌಖ್ಯದಿಂದ ಶನಿವಾರದಂದು ಸ್ವಗೃಹದಲ್ಲಿ ನಿಧನರಾದರು.

ಕಳೆದ ಕೆಲ‌ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರದಂದು ಮನೆಗೆ ಕರೆದುಕೊಂಡು ಬರಲಾಗಿತ್ತು. ಮೃತರು ಪತ್ನಿ, ಪುತ್ರರಾದ ಕಡಬದ ಉದಯವಾಣಿ ಪತ್ರಕರ್ತ ನಾಗರಾಜ್ ಎನ್.ಕೆ., ಕಡಬ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಪ್ರಸಾದ್ ಕೆ.ಎನ್., ಪುತ್ರಿ ಭಾರತಿರವರನ್ನು ರವರನ್ನು ಅಗಲಿದ್ದಾರೆ.

Also Read  ಬಂಟ್ವಾಳ: ವ್ಯಕ್ತಿಯೋರ್ವನ ಕೊಲೆ ಯತ್ನ ➤ ಆಸ್ಪತ್ರೆಗೆ ದಾಖಲು

error: Content is protected !!
Scroll to Top