ಅಕ್ರಮ‌ ಗಾಂಜಾ ಮಾರಾಟ ಯತ್ನ ► ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.01. ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಉಳ್ಳಾಲ ಪೊಲೀಸರು 1 ಕೆಜಿ 50 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಕಾಸರಗೋಡಿನ ಉಪ್ಪಳ‌ ಕುಂಟುಪುಣಿ ನಿವಾಸಿ ಎ.ಕೆ.ಮಹಮ್ಮದ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದಿಕ್ (32) ಎಂದು ಗುರುತಿಸಲಾಗಿದೆ. ಈತ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿಯಲ್ಲಿ ಅಕ್ರಮ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಆಧರಿಸಿ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಆರ್ ಮತ್ತು ಉಪ ನಿರೀಕ್ಷಕರಾದ ವಿನಾಯಕ ತೋರಗಲ್‌ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಬೈಕ್‌ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ.

Also Read  ಪದ್ಮಶ್ರೀ ಪ್ರಶಸ್ತಿ- ಅರ್ಜಿ ಆಹ್ವಾನ

error: Content is protected !!
Scroll to Top