ಬೆಂಗಾಲ್ ವಾರಿಯರ್ಸ್‌ ತಂಡಕ್ಕೆ ಆಯ್ಕೆಯಾದ ಮಿಥಿನ್ ಗೆ ಹುಟ್ಟೂರ ಅಭಿನಂದನೆ ► ತೆರೆದ ವಾಹನದಲ್ಲಿ ಕಡಬ ಪೇಟೆಯಾದ್ಯಂತ ಮೆರವಣಿಗೆ

(ನ್ಯೂಸ್ ಕಡಬ) newskadaba.com ಕಡಬ, ಜೂ.01. ಮುಂಬರುವ ಪ್ರೋ ಕಬಡ್ಡಿ ಟೂರ್ನಿಯಲ್ಲಿ ಬೆಂಗಾಲ್ ವಾರಿಯರ್ಸ್ ಪರ ಆಡಲು ಆಯ್ಕೆಯಾದ ಕಡಬದ ಯುವಕನಿಗೆ ಜನಪ್ರಿಯ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಹಾಗೂ ಊರಿನ ಕಬಡ್ಡಿ ಅಭಿಮಾನಿಗಳ ವತಿಯಿಂದ ಅಭಿನಂದನಾ ಮೆರವಣಿಗೆಯು ಕಡಬ ಪೇಟೆಯಲ್ಲಿ ಶುಕ್ರವಾರ ಸಂಜೆ‌ ನಡೆಯಿತು.

ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ನಿವಾಸಿ ಅನ್ನಯ್ಯ – ಪ್ರೇಮ ದಂಪತಿಯ ಪುತ್ರ ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿ ಮಿಥಿನ್ ಕುಮಾರ್ ಪ್ರೋ ಕಬಡ್ಡಿ 2018 ರಲ್ಲಿ ಜೂನಿಯರ್ ರಾಷ್ಟ್ರೀಯ ಆಟಗಾರರಾಗಿ ಬೆಂಗಾಲ್ ವಾರಿಯರ್ಸ್ ಪರ ಆಡಲಿರುವ ಹಿನ್ನೆಲೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅಭಿನಂದಿಸಲಾಯಿತು. ಸೈಂಟ್ ಜೋಕಿಮ್ಸ್ ಕಾಲೇಜಿನ ಬಳಿಯಿಂದ ಕಡಬ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು.

Also Read  ಬೆಳ್ತಂಗಡಿಯ ಕಿಂಡಿ ಅಣೆಕಟ್ಟುಗಳ ಮರುನಿರ್ಮಾಣಕ್ಕೆ 30 ಕೋ.ರೂ. ಬಿಡುಗಡೆ ➤ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ ಮಾಧುಸ್ವಾಮಿ

error: Content is protected !!
Scroll to Top