ಹೀರೋ ಅಧಿಕೃತ ಮಾರಾಟ ಸಂಸ್ಥೆ ಕೀರ್ತಿ ಮೋಟಾರ್ ರವರ ಸಹಸಂಸ್ಥೆ ► ಕೀರ್ತಿ ಸರ್ವೀಸಸ್ ಇಂದು (ಜೂ.01) ಕುಕ್ಕೇ ಸುಬ್ರಹ್ಮಣ್ಯದಲ್ಲಿ ಶುಭಾರಂಭ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.01. ಹೀರೋ ದ್ವಿಚಕ್ರ ವಾಹನಗಳ ಅಧಿಕೃತ ಮಾರಾಟ ಸಂಸ್ಥೆಯಾದ ಕೀರ್ತಿ ಮೋಟಾರ್ ರವರ ಸಹ ಸಂಸ್ಥೆ ಹೀರೋ ಸರ್ವೀಸಸ್ ಇಂದು ಕುಕ್ಕೇ ಸುಬ್ರಹ್ಮಣ್ಯದಲ್ಲಿ ಶುಭಾರಂಭಗೊಳ್ಳಲಿದೆ.

ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಆದಿ ಸುಬ್ರಹ್ಮಣ್ಯ ರಸ್ತೆಯ ನಾಗಹಿತ್ಲುವಿನಲ್ಲಿ ಜೂನ್ 01 ಶುಕ್ರವಾರದಂದು ಪೂರ್ವಾಹ್ನ 11 ಗಂಟೆಗೆ ನೂತನ ಸಂಸ್ಥೆಯು ಆರಂಭಗೊಳ್ಳಲಿದೆ. ಎಲ್ಲಾ ಹೀರೋ ದ್ವಿಚಕ್ರ ವಾಹನಗಳ ಪ್ರದರ್ಶನ, ಮಾರಾಟ ಮತ್ತು ಸರ್ವೀಸ್ ಮಾಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ನರೇಶ್ ತಿಳಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೀರೋ ದ್ವಿಚಕ್ರ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಪರಿಸರದ ಜನರ ಮನೆ ಮಾತಾಗಿ ಕಡಬದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕೀರ್ತಿ ಮೋಟಾರ್ ಪ್ರಸ್ತುತ ನೆಲ್ಯಾಡಿ ಹಾಗೂ ಪಂಜದಲ್ಲಿ ಸಹ ಸಂಸ್ಥೆಯನ್ನು ಹೊಂದಿದೆ.

Also Read  ಅಟೋ ರಿಕ್ಷಾ ಪಲ್ಟಿ ➤ ಓರ್ವ ಪ್ರಯಾಣಿಕನಿಗೆ ಗಾಯ

error: Content is protected !!
Scroll to Top