ಕಲ್ಲಾಜೆ: ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹಲ್ಲೆ ► ಇತ್ತಂಡದವರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಕ್ಷುಲ್ಲಕ ಕಾರಣಕ್ಕೆ ಪರಸ್ಪರ ಹಲ್ಲೆ‌ ನಡೆಸಿದ ಪರಿಣಾಮ ವ್ಯಕ್ತಿಯೋರ್ವರು ಗಂಭೀರ ಗಾಯಗೊಂಡ ಘಟನೆ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಓಟಕಜೆ ಎಂಬಲ್ಲಿ ಗುರುವಾರದಂದು ನಡೆದಿದೆ.

ಗಾಯಾಳುವನ್ನು ಐತ್ತೂರು ಗ್ರಾಮದ ಓಟಕಜೆ‌ ಕಾಲನಿ ನಿವಾಸಿ ಸೆಂದಿಲ್ ಕುಮಾರ್ ಎಂದು ಗುರುತಿಸಲಾಗಿದೆ. ಕಾಲನಿಯ ಮಹಿಳೆಯರ ನಡುವೆ ಅವ್ಯಾಚ್ಯ ಶಬ್ದಗಳಿಂದ ಬೈಗುಳಗಳುಂಟಾಗಿದ್ದು, ಪರಸ್ಪರ ಹಲ್ಲೆ‌ ನಡೆಸಿದ್ದಾರೆ ಎನ್ನಲಾಗಿದೆ. ನಡುವೆ ಕಾಲನಿ ನಿವಾಸಿ ವೀರಮುತ್ತು ಎಂಬವರು ಇತರರೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ ಪರಿಣಾಮ ಗಂಭೀರ ಗಾಯಗೊಂಡಿರುವ ಸೆಂದಿಲ್‌ ಕುಮಾರ್ ರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೀರಮುತ್ತು ಹಾಗೂ‌ ಇತರರು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ
ಗೆ ಸೆಂದಿಲ್‌ ಕುಮಾರ್ ರ ಪತ್ನಿ ಸುಜಾತ ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ತಲಪಾಡಿ: ಮೂವರ ಸಾವಿಗೆ ವಿಷಾನಿಲ ಸೇವನೆ ಕಾರಣ ► ಜನರೇಟರ್ ಹೊಗೆಯಿಂದ ಉಂಟಾದ ಕಾರ್ಬನ್ ಮಾನಾಕ್ಸೈಡ್ ಗೆ ಮೂವರು ಬಲಿ

error: Content is protected !!
Scroll to Top