ಪ್ರಧಾನಿಯಾಗದೇ ರಾಜಕೀಯ ನಿವೃತ್ತಿ ಇಲ್ಲ: ಹುಚ್ಚ ವೆಂಕಟ್ ► ಠೇವಣಿ ಕಳೆದುಕೊಂಡರೂ ಪ್ರಚಾರವಿಲ್ಲದೇ ವೆಂಕಟ್ ಪಡೆದ ಮತಗಳೆಷ್ಟು ಗೊತ್ತೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.31. ನಾನು ಪ್ರಧಾನ ಮಂತ್ರಿಯಾಗದೆ ರಾಜಕೀಯದಿಂದ ನಿವೃತ್ತಿ ಹೊಂದುವುದಿಲ್ಲ ಎಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿರುವ ಹುಚ್ಚಾ ವೆಂಕಟ್ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಮುಂದೊಂದು ದಿನ ದೇಶದ ಪ್ರಧಾನಿಯಾಗಿಯೇ ತೀರುತ್ತೇನೆ. ಪ್ರಧಾನಿಯಾಗದೆ ರಾಜಕೀಯದಿಂದ ನಿರ್ಗಮಿಸುವುದಿಲ್ಲ ಎಂದಿರುವ ಅವರು ರಾಜರಾಜೇಶ್ವರಿ ನಗರದಲ್ಲಿ ಮನೆ – ಮನೆಗೆ ಭೇಟಿ ನೀಡಿ ಮತ ಕೇಳಿರಲಿಲ್ಲ. ಮತದಾರರೇ ನೇರವಾಗಿ ತನಗೆ ಮತ ಹಾಕಬೇಕು. ಯಾರು ದುಡ್ಡಿಗಾಗಿ ಮತವನ್ನು ಮಾರಿಕೊಳ್ಳುತ್ತಾರೋ ಅವರು ನನ್ನ ಎಕ್ಕಡ ಸಮಾನ ಎಂದಿದ್ದ ಅವರು ಎಲ್ಲಿಯೂ ಪ್ರಚಾರ ಮಾಡಿರಲಿಲ್ಲ. ಈ ಹುಚ್ಚನಿಗೆ ಯಾರು ವೋಟ್ ಹಾಕ್ತಾರೆ ಬೇಕಲ್ಲ ಎಂದು ಹಲವರು ವ್ಯಂಗ್ಯವಾಡಿದ್ದರು. ಆದರೂ ಹುಚ್ಚ ವೆಂಕಟ್ 764 ಮತಗಳನ್ನು ಪಡೆಯುವುದರ ಮೂಲಕ ಹೀನಾಯವಾಗಿ ಸೋತರೂ, ಸೋಲಿನ ನಡುವೆ ತನ್ನ ಪರವಾಗಿ ವೋಟ್ ಹಾಕುವ ಜನರಿದ್ದಾರೆ ಎಂದು ಖುಷಿಪಟ್ಟಿದ್ದಾರೆ‌.

Also Read  ಅಕ್ರಮ ಸೇಂದಿ ಮಾರಾಟ ➤ 20 ಲೀ. ಸೇಂದಿ ವಶ, ಆರೋಪಿಗಳು ಪರಾರಿ

error: Content is protected !!
Scroll to Top