ಬೆಳ್ತಂಗಡಿ:‌ ಎರ್ಮಾಯ್‌ ಫಾಲ್ಸ್‌ನಿಂದ ಕೆಳಗೆ ಬಿದ್ದು ಚಿತ್ರ ನಿರ್ದೇಶಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಮೇ.30. ಇಲ್ಲಿನ ಎರ್ಮಾಯ್ ಫಾಲ್ಸ್ ನಿಂದ‌ ಕಾಲು ಜಾರಿ ಕೆಳಗಡೆ‌ ಬಿದ್ದು ಕನ್ನಡ ಚಿತ್ರ ನಿರ್ದೇಶಕರೋರ್ವರು ಜಲ ಸಮಾಧಿಯಾದ ಘಟನೆ ಬುಧವಾರದಂದು ನಡೆದಿದೆ.

‘ಕನಸು ಕಣ್ಣು ತೆರೆದಾಗ’ ಕನ್ನಡ ಚಿತ್ರದ ನಿರ್ದೇಶಕ ಸಂತೋಷ್ ಶೆಟ್ಟಿ ಕಟೀಲ್ ಎರ್ಮಾಯ್ ಫಾಲ್ಸ್‌ನಿಂದ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ದೈವಿ. ಇವರು ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಅರಣ್ಯ ವ್ಯಾಪ್ತಿಯ ಕಾಡಿನ ಮಧ್ಯದಲ್ಲಿರುವ ಎರ್ಮಾಯ್ ಫಾಲ್ಸ್‌ನಲ್ಲಿ ಫೋಟೊ ಶೂಟ್ ನಡೆಸಲು ತನ್ನ ತಂಡದೊಂದಿಗೆ ತೆರಳಿದ್ದು, ಸಂತೋಷ್ ಕಾಲಿಗೆ ಭಾರವಾದ ವಸ್ತು ಕಟ್ಟಿಕೊಂಡು ನಟನೆ ಮಾಡುತ್ತಿದ್ದಾಗ ಕೆಳಗೆ ಬಿದ್ದು ಜಲ ಸಮಾಧಿಯಾಗಿದ್ದಾರೆ ಎನ್ನಲಾಗಿದೆ.

Also Read  ರಾಜ್ಯದಲ್ಲಿ ಬಿಜೆಪಿ ಪಕ್ಷವು ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಲಿದೆ ► ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ

error: Content is protected !!
Scroll to Top