ಮುಂಗಾರು ಮಳೆಗೆ ಮಹಿಳೆ ಮೃತ್ಯು ► ಮಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಕರಾವಳಿಯಲ್ಲಿ ಮಂಗಳವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಹಿಳೆಯೋರ್ವರು ಮೃತಪಟ್ಟಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮನೆಯ ಹಿಂಬದಿಯ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಮಣ್ಣಿನಡಿಗೆ ಸಿಲುಕಿ ಕೊಂಡು ಕೆಪಿಟಿ ಬಳಿಯ ಉದಯ ನಗರ ನಿವಾಸಿ ಮೋಹಿಣಿ (60) ಮೃತಪಟ್ಟಿದ್ದಾರೆ. ಸುಮಾರು ಎಂಟು ಗಂಟೆಗಳ ಕಾಲ‌ ಮಣ್ಣಿನಡಿ ಸಿಲುಕಿದ್ದ ಇವರನ್ನು ರಕ್ಷಿಸಲು ಮಂಗಳೂರು ಪೂರ್ವ ಠಾಣೆ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಮತ್ತು ಸ್ಥಳೀಯರು ಹರಸಾಹಸಪಟ್ಟರೂ ಬದುಕಿಸಲಾಗಲಿಲ್ಲ. ಇನ್ನೊಂದೆಡೆ ಅಡ್ಯಾರ್ ಕಣ್ಣೂರ್ ನ ಬೋರುಗುಡ್ಡೆ ಎಂಬಲ್ಲಿ ಮಳೆಗೆ ಕಂಪೌಂಡ್ ಕುಸಿದ ಪರಿಣಾಮ ನಾಲ್ವರು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲೇ ನಿಲ್ಲಿಸಲಾಗಿದ್ದ ಓಮ್ನಿ ಕಾರಿನ ಮೇಲೆ ಕಲ್ಲುಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ.

Also Read  ಜ. 17ರಂದು ಲೋಕಾಯುಕ್ತರಿಂದ ಜನಸಂಪರ್ಕ ಸಭೆ

error: Content is protected !!
Scroll to Top