ಅತ್ತಾವರ: ಮಗುವೊಂದು ನೆರೆನೀರಿನಲ್ಲಿ ಕೊಚ್ಚಿ ಹೋದ ಶಂಕೆ ► ಅಗ್ನಿಶಾಮಕ ದಳದಿಂದ ಮುಂದುವರಿದ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.29. ಮಂಗಳೂರಿನಲ್ಲಿ ಮಗುವೊಂದು ಮಳೆ ನೀರಿಗೆ ಕೊಚ್ಚಿಹೋದ ಬಗ್ಗೆ ಶಂಕೆಯುಂಟಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ ಆರಂಭವಾಗಿದೆ.

ನಗರದ ವಿವಿಧೆಡೆ ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆಯಾಗುತ್ತಿದ್ದು, ಅತ್ತಾವರದಲ್ಲಿ ಮಗುವೊಂದು ಕಾಣೆಯಾಗಿದ್ದು, ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಲ್ಲದೆ ಜಲಾವೃತವಾಗಿರುವ ಕಡೆಗಳಲ್ಲಿನ ಮನೆಗಳಿಂದ ಸಾರ್ವಜನಿಕರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

Also Read  ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಾಟ ➤ ಓರ್ವ ಆರೋಪಿ ವಶಕ್ಕೆ

error: Content is protected !!
Scroll to Top