ಹೊಸ್ಮಠ: ಹಳೆ ಸೇತುವೆಯ ಬದಿಯಲ್ಲಿನ ಮಣ್ಣು ಕುಸಿತ ► ಕೆಲಕಾಲ ಸಂಚಾರ ಅಸ್ತವ್ಯಸ್ತ

ಕಡಬ, ಮೇ.28. ಇಲ್ಲಿನ ಹೊಸ್ಮಠ ಹಳೆ ಸೇತುವೆಯ ಒಂದು ಭಾಗದ ಮಣ್ಣು ಕುಸಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರದಲ್ಲಿ ತಡೆಯುಂಟಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.

ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಮುಳುಗು ಸೇತುವೆಗೆ ಬದಲಿಯಾಗಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ನೂತನ ಸೇತುವೆ ನಿರ್ಮಾಣದ ಹಿನ್ನೆಲೆಯಲ್ಲಿ ಹಳೆಯ ಸೇತುವೆಯ ಬದಿಯಿಂದ ನೀರನ್ನು ಬಿಟ್ಟಿದ್ದರಿಂದಾಗಿ ಸೇತುವೆಯ ಒಂದು ಭಾಗದ ಮಣ್ಣು ಕುಸಿದಿದೆ. ಸೋಮವಾರ ಮುಂಜಾನೆ ಕೊಲ್ಲೂರಿಗೆ ತೆರಳುತ್ತಿದ್ದ ಕಡಬದ ದೇವಿಪ್ರಸಾದ್ ಹೋಟೆಲ್ ಮಾಲಕ ಮನೋಹರ್ ರೈ ಎಂಬವರು ಸೇತುವೆಯ ಮಣ್ಣು ಕುಸಿದಿರುವುದನ್ನು ಕಂಡು ಮುಂಜಾಗ್ರತಾ ಕ್ರಮವಾಗಿ ಕೆಲವು ಗೋಣಿಚೀಲಗಳನ್ನು ಅಡ್ಡಲಾಗಿ ಇಟ್ಟು ತೆರಳಿದರೆನ್ನಲಾಗಿದೆ. ಆ ಬಳಿಕ ನೂತನ ಸೇತುವೆಯ ಗುತ್ತಿಗೆದಾರರು ಹಿಟಾಚಿ ಮೂಲಕ ಕಲ್ಲುಗಳನ್ನು ಹಾಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Also Read  ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ನೀರಿನ ಟ್ಯಾಂಕ್ ವಿತರಣೆ

error: Content is protected !!
Scroll to Top