ಮಂಗಳೂರು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಮೃತಪಟ್ಟ ಅಪರಿಚಿತ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.27. ಚಲಿಸುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರು ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು ಬಸ್ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸರಕಾರಿ ಬಸ್ ಹತ್ತಿದ್ದ ಈ ಅಪರಿಚಿತ ವ್ಯಕ್ತಿ ಸೀಟಿನಲ್ಲಿ ಮಲಗಿದ್ದು, ಈತ ನಿದ್ದೆ ಮಾಡಿರಬಹುದೆಂದು ಎಲ್ಲರೂ ಭಾವಿಸಿ ಸುಮ್ಮನಿದ್ದರು. ಆದರೆ ಬಸ್ ಕೆಎಸ್ಸಾರ್ಟಿಸಿ ನಿಲ್ದಾಣಕ್ಕೆ ಆಗಮಿಸಿ ಎಲ್ಲ ಪ್ರಯಾಣಿಕರು ಇಳಿದರೂ, ಈತ ಮಲಗಿದ ಸ್ಥಿತಿಯಲ್ಲಿದ್ದುದನ್ನು ಕಂಡು ಬಸ್ಸಿನ ಸಿಬ್ಬಂದಿ ಎಬ್ಬಿಸಲು ಪ್ರಯತ್ನಪಟ್ಟಾಗ ಮೃತಪಟ್ಟಿರುವುದು ಕಂಡು ಬಂದಿದೆ. ಹೃದಯಾಘಾತಕ್ಕೀಡಾಗಿ ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬಸ್‌ ಗಳಲ್ಲಿ ಕರ್ಕಶ ಹಾರ್ನ್, ಧ್ವನಿವರ್ಧಕ ಬಳಕೆ ವಿರುದ್ಧ ಕಾರ್ಯಾಚರಣೆ..!

error: Content is protected !!
Scroll to Top