ಕೊರಗಜ್ಜನ ಹುಂಡಿಗೆ ಕಾಂಡೋಮ್ ಹಾಕಿ ದರ್ಪ ಮೆರೆದ ಯುವಕರು ► ತಿಂಗಳೊಳಗೆ ಸೊಂಟದ ಬಲ ಕಳೆದುಕೊಂಡಾಗ ಬೆಳಕಿಗೆ ಬಂತು ಕೊರಗಜ್ಜನ ಪವಾಡ

(ನ್ಯೂಸ್ ಕಡಬ) newskadaba.com ಉಡುಪಿ, ಮೇ.27. ಕೊರಗಜ್ಜ ಸ್ವಾಮಿಯ ಕಾಣಿಕೆ‌ ಹುಂಡಿಯ ಮೇಲೆ ಮೂತ್ರ‌ ಮಾಡಿ ಡಬ್ಬಿಯೊಳಗಡೆ ಕಾಂಡೋಮ್ ಹಾಕಿ ಅಗೌರವ ತೋರಿದ ಯುವಕನೋರ್ವನ ಆರೋಗ್ಯದಲ್ಲಿ ಏರುಪೇರಾಗಿ ಕೊನೆಗೆ ಕ್ಷಮೆ ಕೇಳಿ ಘಟನೆ ಇಲ್ಲಿನ ಕಟಪಾಡಿಯಲ್ಲಿ ನಡೆದಿದೆ.

ಕಟಪಾಡಿ ಎಸ್.ವಿ.ಎಸ್ ಕಾಲೇಜಿನ ಮುಂಭಾಗದಲ್ಲಿರುವ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಗೆ ಮುಸ್ಲಿಂ ಯುವಕರ ಗುಂಪೊಂದು ಮೂತ್ರಮಾಡಿ, ಡಬ್ಬಿಯ ಒಳಗೆ ಒಂದಿಷ್ಟು ಕಸ ಮತ್ತು ಕಾಂಡೋಮ್ ಹಾಕಿ ದರ್ಪ ಮೆರೆದಿದ್ದಾರೆ ಎನ್ನಲಾಗಿದೆ. ದೈವಸ್ಥಾನದ ವಾರ್ಷಿಕೋತ್ಸವ ಸಮೀಪಿಸಿದಾಗ ಹತ್ತು ಸಮಸ್ತರು ಜೊತೆ ಸೇರಿದಾಗ ಈ ವಿಚಾರ ತಿಳಿದುಬಂದಿದ್ದು, ಆದರೆ ಈ ಕೃತ್ಯವೆಸಗಿದವರು ಯಾರೆಂದು ತಿಳಿಯದೇ ಹೋದಾಗ ಸರ್ವರೂ ಜೊತೆಗೂಡಿ ಕೊರಗಜ್ಜ ಮತ್ತು ಬಬ್ಬು ಸ್ವಾಮಿಗೆ ದೂರು ಸಲ್ಲಿಸಿದ್ದರು.

Also Read  ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ಅವಹೇಳನ ► ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ದೂರು

ದೂರು ಸಲ್ಲಿಸಿ ತಿಂಗಳು ಕಳೆಯುವುದರೊಳಗೆ ವಿಕೃತಿ ಮೆರೆದಿದ್ದ ತಂಡದಲ್ಲಿದ್ದ ಯುವಕನೋರ್ವ ಮಾನಸಿಕವಾಗಿ ವರ್ತಿಸುತ್ತಿರುವುದು ಕಂಡುಬಂದಿದ್ದಲ್ಲದೆ ಸೊಂಟದಿಂದ ಕೆಳಗೆ ಬಲವಿಲ್ಲದಂತಾಗಿ ಯಾವುದೇ ಔಷಧಿಯಲ್ಲಿ ಗುಣಮುಖವಾಗದೇ ಇದ್ದಾಗ ದಿಗ್ಭ್ರಮೆಗೊಂಡ ಹುಡುಗನ ಪೋಷಕರು ಜ್ಯೋತಿಷ್ಯರ ಬಳಿ ವಿಚಾರಿಸಿದಾಗ ಯುವಕರು ನಡೆಸಿದ ದುಷ್ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಆ ಹುಡುಗನ ತಂದೆ ದೈವಸ್ಥಾನದ ಸದಸ್ಯರ ಬಳಿ ವಿಚಾರ ತಿಳಿಸಿದ್ದು, ಶುಕ್ರವಾರದಂದು ಪೇಟೆಬೆಟ್ಟು ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕೊರಗಜ್ಜ ಮತ್ತು ಬಬ್ಬುಸ್ವಾಮಿಯ ದರ್ಶನ ಸೇವೆ ನಡೆಸಿದಾಗ ಇತರ ಇಬ್ಬರೊಂದಿಗೆ ತಾನು ಈ ಕೃತ್ಯ ಎಸಗಿರುವುದಾಗಿ ಬಾಯಿಬಿಟ್ಟಿದ್ದಾನೆ ಎನ್ನಲಾಗಿದೆ. ಬಳಿಕ ಕೊರಗಜ್ಜನ ಬಳಿ ಕ್ಷಮೆ ಯಾಚಿಸಿದ್ದು ಕೊರಗಜ್ಜ ಆ ಹುಡುಗನಿಗೆ ಅಭಯ ವಾಕ್ಯ ನೀಡಿ ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Also Read  ಕಳಿಯ: ಸಿಡಿಲು ಬಡಿದು ಮನೆಗೆ ಹಾನಿ

error: Content is protected !!
Scroll to Top