ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ವಾಟ್ಸ್ಅಪ್ ನಲ್ಲಿ ಕೊಂದ ಕಿಡಿಗೇಡಿಗಳು ► ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಸಂದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.26. ಶತಾಯುಷಿ ಸಾಲುಮರದ ತಿಮ್ಮಕ್ಕನನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಸಾಲುಮರದ ತಿಮ್ಮಕ್ಕ ಇನ್ನಿಲ್ಲ ಎಂಬ ಸಂದೇಶವನ್ನು ಯಾರೋ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಾದ ವಾಟ್ಸ್ಅಪ್ ಹಾಗೂ ಫೇಸ್‌ಬುಕ್‌ ಗಳಲ್ಲಿ ಹರಿಯಬಿಟ್ಟು ವಿಕೃತ ಸಂತೋಷವನ್ನು ಅನುಭವಿಸಿದ್ದಾರೆ. ಶುಕ್ರವಾರ ರಾತ್ರಿಯಿಂದ ಹರಿದಾಡತೊಡಗಿದ ಈ ಸಂದೇಶವನ್ನು ನಿಜ ಎಂದು ತಿಳಿದು ಹಲವರು ನಾಮುಂದು ತಾಮುಂದು ಎನ್ನುವಂತೆ ಶೇರ್ ಮಾಡಿದ್ದಾರೆ. ಕೊನೆಗೆ ಇದು ಒಂದು ಸುಳ್ಳು ಸುದ್ದಿಯಾಗಿದ್ದು, ಯಾರೋ ವಿಕೃತ ಸಂತೋಷಿಗಳ ಕುತಂತ್ರದಿಂದಾಗಿ ಇಂತಹ ಸಂದೇಶ ರವಾನೆಯಾಗಿದೆ. ಅವರು ಇನ್ನೂ ಬದುಕಿದ್ದಾರೆ ಎನ್ನುವದನ್ನು ಅರಿತ ಅಮಾಯಕರು ಇದೀಗ ಪರಿತಪಿಸುತ್ತಿದ್ದಾರೆ.

Also Read  ಸುಂಕದಕಟ್ಟೆ ಎಸ್.ಕೆ.ಎಸ್.ಬಿ.ವಿ; ಪದಾಧಿಕಾರಿಗಳ ಆಯ್ಕೆ

error: Content is protected !!
Scroll to Top