ಘಟ್ಟ ಪ್ರದೇಶದಲ್ಲಿ ಮಳೆ‌ ಸುರಿದ ಹಿನ್ನೆಲೆ ► ಕಡಬ – ಎಡಮಂಗಲ ಸಂಪರ್ಕ ರಸ್ತೆಯ ಪಾಲೋಳಿ ತಾತ್ಕಾಲಿಕ ಸೇತುವೆ ಮುಳುಗಡೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಇದರಿಂದಾಗಿ ಕಡಬ – ಎಡಮಂಗಲವನ್ನು ಸಂಪರ್ಕಿಸುವ ಪಿಜಕ್ಕಳ ಪಾಲೋಳಿ ತಾತ್ಕಾಲಿಕ ಸೇತುವೆಯು ಮುಳುಗಡೆಗೊಂಡಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಸುಮಾರು ನಾಲ್ಕು ವರ್ಷಗಳ ಹಿಂದೆ ಸಾರ್ವಜನಿಕರಿಂದಲೇ ನಿರ್ಮಾಣಗೊಂಡು ಬೇಸಿಗೆಯಲ್ಲಿ ಮಾತ್ರ ಸಂಚಾರಕ್ಕೆ ಮುಕ್ತವಾಗಿದ್ದ ಪಾಲೋಳಿ ಸೇತುವೆಯನ್ನು ಸಿಮೆಂಟ್ ಪೈಪ್ ಗಳನ್ನು ಬಳಸಿ ಊರವರೇ ಎಂಟು ಲಕ್ಷ ರೂ. ವೆಚ್ಚದಲ್ಲಿ ಶ್ರಮದಾನದ ಮೂಲಕ ನಿರ್ಮಿಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಮಳೆಗಾಲದಲ್ಲಿ ಮುಳುಗಡೆಗೊಂಡು ಹಾನಿಗೀಡಾಗುತ್ತಿದ್ದ ಸೇತುವೆಯನ್ನು ಪ್ರತೀವರ್ಷ ಸರಿಪಡಿಸಲಾಗುತ್ತಿತ್ತು. ಆದರೆ ಶುಕ್ರವಾರ ಸಂಜೆ ಸೇತುವೆಯು ಮುಳುಗಡೆಗೊಂಡಿದ್ದು, ಸಂಚಾರ ಕಡಿತಗೊಂಡಿದೆ. ಕಡಬದಿಂದ ಎಡಮಂಗಲವನ್ನು ಸಂಪರ್ಕಿಸಬೇಕಾದರೆ 12 ಕಿ.ಮೀ. ಕೋಡಿಂಬಾಳ ಮೂಲಕ ಸುತ್ತುಬಳಸುವುದರ‌ ಬದಲಿಗೆ ಕೇವಲ 4 ಕಿ.ಮೀ. ಅಂತರದಲ್ಲಿ ಸಂಪರ್ಕಿಸಲು ಊರವರೇ ಕಂಡುಕೊಂಡ ಹಾದಿಯಾಗಿತ್ತು‌.

Also Read  ಪುತ್ತೂರು: ಮನೆಗೆ ನುಗ್ಗಿದ ಕಳ್ಳರು..! ➤ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ಕಳವು

error: Content is protected !!
Scroll to Top