ವಿಶ್ವಾಸ ಗೆದ್ದ ‘ಕುಮಾರ’ ► ಬಹುಮತ ಸಾಬೀತು ಪಡಿಸಿದ ಸಿಎಂ ಕುಮಾರಸ್ವಾಮಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.25. ವಿಶ್ವಾಸ ಮತ ಯಾಚನೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಗೆದ್ದಿದ್ದು, ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬಹುಮತವಿದೆ ಎಂದು ಸ್ಪೀಕರ್ ಘೋಷಿಸಿದ್ದಾರೆ.

ಇದರೊಂದಿಗೆ ಹಲವು ದಿನ ರಾಜಕೀಯ ಗೊಂದಲಗಳಿಗೆ ತಕ್ಕಮಟ್ಟಿಗೆ ವಿರಾಮ‌ ದೊರೆತಂತಾಗಿದೆ. ವಿಧಾನಸಭೆ ಕಲಾಪದಲ್ಲಿ ಸುದೀರ್ಘ ಭಾಷಣ ಮಾಡಿದ ಬಿಎಸ್ವೈ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿ ಕಲಾಪದಿಂದ ಬಿಜೆಪಿ ಶಾಸಕರ ಜೊತೆ ಹೊರನಡೆದಿದ್ದರು. ವಿಪಕ್ಷದ ಅನುಪಸ್ಥಿತಿಯಲ್ಲಿ ಬಹುಮತ ಸಾಬೀತುಪಡಿಸಲಾಗಿದ್ದು, ಕುಮಾರಸ್ವಾಮಿ ವಿಶ್ವಾಸವನ್ನು ಗೆದ್ದಿದ್ದಾರೆ.

error: Content is protected !!
Scroll to Top